2024 ರ ವೇಳೆ ಭಾರತದಲ್ಲೂ ಅಮೆರಿಕಕ್ಕೆ ಸಮಾನವಾದ ರಸ್ತೆ: ಭರವಸೆ ನೀಡಿದ ನಿತಿನ್ ಗಡ್ಕರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

2024 ರ ವೇಳೆಗೆ ಭಾರತವು ಅಮೆರಿಕಕ್ಕೆ ಸಮಾನವಾದ ರಸ್ತೆ ಮೂಲಸೌಕರ್ಯವನ್ನು ಹೊಂದಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ (ಎಫ್‌ಐಸಿಸಿಐ) ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಿಶ್ವ ಗುಣಮಟ್ಟದ ರಸ್ತೆ ಮೂಲಸೌಕರ್ಯವನ್ನು ಹೊಂದಲಿದ್ದೇವೆ. 2024 ರ ಅಂತ್ಯದ ಮೊದಲು ರಸ್ತೆ ಮೂಲಸೌಕರ್ಯವು ಅಮೆರಿಕದ ಗುಣಮಟ್ಟಕ್ಕೆ ಸಮಾನವಾಗಿರುತ್ತದೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಲಾಜಿಸ್ಟಿಕ್ ವೆಚ್ಚವು ಒಂದು ದೊಡ್ಡ ಸಮಸ್ಯೆಯಾಗಿದೆ, ಪ್ರಸ್ತುತ ಇದು ಜಿಡಿಪಿಯ ಶೇಕಡಾ 16ಕ್ಕೆ ಬರುತ್ತದೆ. 2024ರ ಅಂತ್ಯದ ವೇಳೆಗೆ ಈ ಅಂಕಿ ಅಂಶವು ಶೇಕಡಾ 9ಕ್ಕೆ ಇಳಿಯುತ್ತದೆಎಂದು ಭರವಸೆ ನೀಡಿದರು.

ಪರ್ಯಾಯ ಇಂಧನ ಪರಿಹಾರಗಳು ದೇಶದಾದ್ಯಂತ ಬೃಹತ್ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತವೆ. ಉತ್ಪಾದಿಸುವ ಒಟ್ಟು ವಿತರಣಾ ಶಕ್ತಿಯ ಪೈಕಿ 38 ಪ್ರತಿಶತದಷ್ಟು ವಿದ್ಯುತ್ ಸೌರಶಕ್ತಿಯಿಂದ ಉತ್ಪತ್ತಿಯಾಗುತ್ತದೆ. ಇದನ್ನು ಶೇಕಡಾ 60 ಕ್ಕೆ ಗುರಿಪಡಿಸಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!