March 12, 2026
Thursday, March 12, 2026
spot_img

ದರೋಡೆಕೋರರು ಹೆಂಡತಿಯನ್ನು ಕೊಂದೇ ಬಿಟ್ರು! ಪತಿಯ ನಾಟಕ ಬಯಲಿಗೆಳೆದ ಪೊಲೀಸರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣ ರಾಜ್ಯದ ಬಹದ್ದೂರ್‌ಗಢದಲ್ಲಿ ಪತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪ್ರೇಮಿಗಳ ದಿನವನ್ನು ಸಂಭ್ರಮದಿಂದ ಆಚರಿಸಿದ ಕೆಲವೇ ಗಂಟೆಗಳಲ್ಲಿ ಈ ದಾರುಣ ಘಟನೆ ನಡೆದಿದ್ದು, ಪೊಲೀಸರು 18 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ.

ಹಿಸಾರ್ ಮೂಲದ ಅನ್ಶುಲ್ ಧವನ್ ಮತ್ತು ಹಂಸಿಯ ಮಹಾಕ್ ಕಳೆದ ವರ್ಷದ ಸೆಪ್ಟೆಂಬರ್ 25ರಂದು ವಿವಾಹವಾಗಿದ್ದರು. ಮಹಾಕ್ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಅನ್ಶುಲ್ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ. ಫೆಬ್ರವರಿ 15ರ ರಾತ್ರಿ ಅನ್ಶುಲ್ ಪೊಲೀಸರಿಗೆ ಕರೆ ಮಾಡಿ, ಅಪರಿಚಿತರು ಮನೆಗೆ ನುಗ್ಗಿ ದರೋಡೆ ಯತ್ನಿಸಿ ಪತ್ನಿಯ ಕತ್ತು ಸೀಳಿದ್ದಾರೆ ಎಂದು ಹೇಳಿದ್ದ.

ಇದನ್ನೂ ಓದಿ:

ಆದರೆ ತನಿಖೆ ವೇಳೆ ಅವನ ಹೇಳಿಕೆಯಲ್ಲಿ ವ್ಯತ್ಯಾಸಗಳು ಕಂಡುಬಂದವು. ದಾಳಿಕೋರರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಗೊಂಡರು. ಕಠಿಣ ವಿಚಾರಣೆಯಲ್ಲಿ ಅನ್ಶುಲ್ ಪತ್ನಿಯನ್ನು ತಾನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪತ್ನಿಯ ಮೇಲಿದ್ದ ಅನುಮಾನ ಹಾಗೂ ದಾಂಪತ್ಯ ಕಲಹವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !