ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಸಂಸದ ಸಂಜಯ್ ಸಿಂಗ್ ನಿವಾಸದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ. ಈ ಹಿಂದೆ ಸಂಸದ ಸಂಜಯ್ ಹಾಗೂ ಅವರಿಗೆ ಆಪ್ತರಾಗಿದ್ದ ಇತರರ ಮನೆಗಳಲ್ಲಿ ಶೋಧ ನಡೆಸಲಾಗಿತ್ತು. ದೆಹಲಿ ಮದ್ಯ ನೀತಿ ಹಗರಣದ ಆರೋಪಿ ದೆಹಲಿ ಮೂಲದ ಉದ್ಯಮಿ ದಿನೇಶ್ ಅರೋರಾ ಹೇಳಿಕೆ ಮೇರೆಗೆ ಈ ಶೋದ ನಡೆಯುತ್ತಿದೆ.
ಸಂಜಯ್ ಸಿಂಗ್ ಅವರನ್ನು ಸಮಾರಂಭವೊಂದರಲ್ಲಿ ಭೇಟಿಯಾಗಿದ್ದೆ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರೊಂದಿಗೆ ಸಂವಾದ ನಡೆಸಿದ್ದೇನೆ ಎಂದು ಅರೋರಾ ಇಡಿಗೆ ತಿಳಿಸಿದ್ದಾರೆ. ದೆಹಲಿ ಚುನಾವಣೆಗೂ ಮುನ್ನ ನಿಧಿ ಸಂಗ್ರಹಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಸದ ಸಂಜಯ್ ಸಿಂಗ್ ಕೋರಿಕೆಯ ಮೇರೆಗೆ, ದಿನೇಶ್ ಅರೋರಾ ರೆಸ್ಟೋರೆಂಟ್ ಮಾಲೀಕರಿಗೆ 32 ಲಕ್ಷ ರೂ. ಚೆಕ್‌ಅನ್ನು ಸಿಸೋಡಿಯಾ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಇಡಿ ತಿಳಿಸಿದೆ. ಮದ್ಯದ ಇಲಾಖೆಯೊಂದಿಗೆ ದಿನೇಶ್ ಅರೋರಾ ಅವರ ದೀರ್ಘಕಾಲದ ಸಮಸ್ಯೆಯನ್ನು ಸಂಸದ ಸಂಜಯ್ ಸಿಂಗ್ ಪರಿಹರಿಸಿದ್ದರು ಎಂದು ಇಡಿ ಆರೋಪಿಸಿದೆ.