September 28, 2026
Monday, September 28, 2026
spot_img

ದೆಹಲಿ ಶ್ರೀ ಕೃಷ್ಣಮಂದಿರಕ್ಕೆ ಭೇಟಿ ನೀಡಿದ ರಾಬರ್ಟ್ ವಾದ್ರಾ: ಗುರುಕುಲದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ವಸಂತ್ ಕುಂಜ್ ನಲ್ಲಿರುವ ಉಡುಪಿ ಪೇಜಾವರ ಮಠದ ಶಾಖೆಯ ಶ್ರೀ ಕೃಷ್ಣಮಂದಿರಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರು ಶುಕ್ರವಾರ ಭೇಟಿ ನೀಡಿದರು.

ಅವರ ಜನ್ಮದಿನ ಪ್ರಯುಕ್ತ ಕೆಲವು ಅಭಿಮಾನಿಗಳು ಮಠದ ಸನಿಹದಲ್ಲಿ ಸಮಾರಂಭವನ್ನು ಏರ್ಪಡಿಸಿದ್ದರು. ಅಲ್ಲಿಗೆ ಬಂದಿದ್ದ ವಾದ್ರಾ ಕೃಷ್ಣಮಂದಿರಕ್ಕೂ ಭೇಟಿ ನೀಡಿ ಶ್ರೀ ಕೃಷ್ಣ , ಶ್ರೀ ದುರ್ಗೆ , ಶ್ರೀ ಮಹೇಶ್ವರ, ಶ್ರೀ ಮುಖ್ಯ ಪ್ರಾಣ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ನೂರಾರು ಅಭಿಮಾನಿಗಳೂ ಉಪಸ್ಥಿತರಿದ್ದರು.

ಮಠದ ಪ್ರಧಾನವ್ಯವಸ್ಥಾಪಕ ಡಾ ವಿಠೋಬಾಚಾರ್ಯ , ಅರ್ಚಕ ಸುಮನ್ ಆಚಾರ್ಯ ಪ್ರಸಾದ ನೀಡಿದರು ಗುರುಕುಲದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.

Must Read