September 2, 2026
Wednesday, September 2, 2026
spot_img

ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ: ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 12 ಕೆಜಿ ಗಾಂಜಾ ಜಪ್ತಿ, ಆರೋಪಿ ಅರೆಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆದಾರರ ವಿರುದ್ಧ ಕಸ್ಟಮ್ಸ್ ಅಧಿಕಾರಿಗಳು ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕನೊಬ್ಬನ ಲಗೇಜ್ ಬ್ಯಾಗ್ ಅನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ, ಒಳಗೆ ಅಡಗಿಸಿಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 12 ಕೆಜಿ ತೂಕದ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ.

ಖಚಿತ ಮಾಹಿತಿ ಆಧರಿಸಿ ದಾಳಿ:

ವಿದೇಶದಿಂದ ಮಾದಕ ವಸ್ತು ಸಾಗಣೆಯಾಗುತ್ತಿರುವ ಬಗ್ಗೆ ಕಸ್ಟಮ್ಸ್ ಕಂಟ್ರೋಲ್ ರೂಂಗೆ ಸಿಕ್ಕ ನಿಖರ ಮಾಹಿತಿ ಆಧರಿಸಿ ಅಧಿಕಾರಿಗಳು ಅಲರ್ಟ್ ಆಗಿದ್ದರು. ಆರೋಪಿಯು ತಪಾಸಣೆಯಿಂದ ತಪ್ಪಿಸಿಕೊಳ್ಳಲು ತನ್ನ ಟ್ರಾವೆಲ್ ಬ್ಯಾಗ್‌ನ ಒಳಭಾಗದಲ್ಲಿ ವಿಶೇಷವಾದ ರಹಸ್ಯ ಖಾನೆಗಳನ್ನು ನಿರ್ಮಿಸಿ ಮಾದಕ ವಸ್ತುವನ್ನು ಪ್ಯಾಕ್ ಮಾಡಿದ್ದನು. ಗಾಂಜಾ ಸಮೇತ ಸಿಕ್ಕಿಬಿದ್ದಿರುವ ಅಂತಾರಾಷ್ಟ್ರೀಯ ದಂಧೆಯ ಶಂಕಿತ ಆರೋಪಿಯನ್ನು ವಶಕ್ಕೆ ಪಡೆದು, ಎನ್‌ಡಿಪಿಎಸ್  ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:

ಜಪ್ತಿ ಮಾಡಲಾದ 12 ಕೆಜಿ ಮಾದಕ ವಸ್ತುವಿನ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಕೋಟ್ಯಂತರ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಇದರ ಹಿಂದೆ ಇರುವ ದೊಡ್ಡ ಜಾಲದ ಪತ್ತೆಗೆ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !