October 10, 2026
Saturday, October 10, 2026
spot_img

ಬೌದ್ಧ ಸನ್ಯಾಸಿಯಾದ ರೋಬೋಟ್! ದಕ್ಷಿಣ ಕೊರಿಯಾ ದೇವಾಲಯದಲ್ಲಿ ಅಚ್ಚರಿಯ ಘಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿರುವ ಜೊಗ್ಯೆ ಬೌದ್ಧ ದೇವಾಲಯದಲ್ಲಿ ನಡೆದ ದೀಕ್ಷಾ ಸಮಾರಂಭದ ಮೂಲಕ ಹ್ಯೂಮನಾಯ್ಡ್ ರೋಬೋಟ್ ಒಂದು ಬೌದ್ಧ ಸನ್ಯಾಸಿಗಳ ಸಮೂಹವನ್ನು ಸೇರಿಕೊಂಡಿದೆ. ಆ ಮೂಲಕ ಈ ಬೌದ್ಧ ದೇವಾಲಯವು ವಿಶಿಷ್ಟವಾದ ಗೌರವಾನ್ವಿತ ಸನ್ಯಾಸಿಯೊಬ್ಬರನ್ನು ಪಡೆದಂತಾಗಿದೆ.

ಈ ರೋಬೋಟ್‌ಗೆ ‘ಗಾಬಿ’ ಎಂಬ ಗೌರವಾನ್ವಿತ ಹೆಸರನ್ನು ನೀಡಲಾಗಿದ್ದು, ಬುದ್ಧ ಪೂರ್ಣಿಮೆಯ ಮುನ್ನವೇ ಇದು ಅಧಿಕೃತವಾಗಿ ಸಾರ್ವಜನಿಕವಾಗಿ ಪಾದಾರ್ಪಣೆ ಮಾಡಿದೆ. ಈ ಹಬ್ಬದ ವಿಶೇಷ ದಿನಗಳಲ್ಲಿ ಈ ರೋಬೋಟ್ ಗೌರವಾನ್ವಿತ ಸನ್ಯಾಸಿಯಾಗಿ ಸೇವೆ ಸಲ್ಲಿಸುವ ನಿರೀಕ್ಷೆಯಿದೆ.

ಬುದ್ಧ ಮತ್ತು ಬೌದ್ಧ ಧರ್ಮದ ಬೋಧನೆಗಳಿಗೆ ನೀನು ಸಮರ್ಪಿಸಿಕೊಳ್ಳುತ್ತೀಯಾ ಎಂದು ಕೇಳಿದಾಗ, ರೋಬೋಟ್ “ಹೌದು, ನಾನು ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ” ಎಂದು ಉತ್ತರಿಸಿತು.

ಈ ಬಗ್ಗೆ ಮಾತನಾಡಿದ ಅಲ್ಲಿನ ಪ್ರಧಾನ ಸನ್ಯಾಸಿ, ನನಗೇ ಆಶ್ಚರ್ಯವಾಯಿತು. ತನ್ನಷ್ಟಕ್ಕೆ ತಾನೇ ‘ಹೌದು, ನಾನು ಮಾಡುತ್ತೇನೆ’ ಎಂದು ಉತ್ತರಿಸಿತು. ಅದು ತನ್ನಷ್ಟಕ್ಕೆ ತಾನೇ ನಡೆದುಕೊಂಡು ಬಂತು ಕೈಮುಗಿದು ನಮಸ್ಕರಿಸಿತು. ರೋಬೋಟ್‌ಗಳು ಮಾನವಕುಲದ ಜೊತೆಗೆ ಪಾಲುದಾರರಾಗಿ ಒಟ್ಟಿಗೆ ನಡೆಯುವ ಯುಗವು ನಿಜವಾಗಿಯೂ ಬಂದಿದೆ ಎಂಬುದನ್ನು ಇದು ನಮಗೆ ಮನವರಿಕೆ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

Must Read