Friday, September 12, 2025

Rock Salt | ಈ ಸಮಸ್ಯೆ ಇರೋರು ಕಲ್ಲು ಉಪ್ಪನ್ನು ತಿನ್ನಲೇ ಬಾರದು: ಆರೋಗ್ಯ ಮತ್ತಷ್ಟು ಹಾಳಾಗುತ್ತೆ!

ಕಲ್ಲು ಉಪ್ಪನ್ನು (Rock Salt) ಸಾಮಾನ್ಯವಾಗಿ ಆರೋಗ್ಯಕರವೆಂದು ಭಾವಿಸಲಾಗುತ್ತದೆ. ವಿಶೇಷವಾಗಿ ಉಪವಾಸದ ಸಮಯದಲ್ಲಿ ಇದನ್ನು ಹೆಚ್ಚು ಸೇವಿಸುವ ಪದ್ಧತಿ ಇದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ, ದೇಹಕ್ಕೆ ಶಕ್ತಿ ನೀಡುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ಕಲ್ಲು ಉಪ್ಪು ಎಲ್ಲರಿಗೂ ಸೂಕ್ತವಲ್ಲ. ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಇದು ಹಾನಿಕಾರಕವಾಗಬಹುದು ಎಂಬುದು ತಿಳಿದಿರಬೇಕು.

ರಕ್ತದೊತ್ತಡ ರೋಗಿಗಳು: ಕಲ್ಲು ಉಪ್ಪಿನಲ್ಲಿ ಸೋಡಿಯಂ ಅಧಿಕವಾಗಿರುವುದರಿಂದ ರಕ್ತದೊತ್ತಡ ಹೆಚ್ಚುವ ಅಪಾಯವಿದೆ.

ಹೃದಯ ರೋಗಿಗಳು: ಹೃದಯದ ಮೇಲೆ ಒತ್ತಡ ಹೆಚ್ಚಿಸುವುದರಿಂದ ಹೃದಯ ಸಮಸ್ಯೆ ಹೆಚ್ಚಾಗಬಹುದು.

ಮೂತ್ರಪಿಂಡ ರೋಗಿಗಳು: ಹೆಚ್ಚುವರಿ ಸೋಡಿಯಂ ತೆಗೆದುಹಾಕಲು ಕಷ್ಟವಾಗುವುದರಿಂದ ಮೂತ್ರಪಿಂಡದ ಸ್ಥಿತಿ ಹದಗೆಡುತ್ತದೆ.

ಮಧುಮೇಹ ರೋಗಿಗಳು: ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ಅಸ್ಥಿರಗೊಳಿಸುತ್ತದೆ.

ಥೈರಾಯ್ಡ್ ರೋಗಿಗಳು: ಕಲ್ಲು ಉಪ್ಪಿನಲ್ಲಿ ಅಯೋಡಿನ್ ಇಲ್ಲದ ಕಾರಣ ಥೈರಾಯ್ಡ್ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳಬಹುದು.

ಹಿರಿಯ ನಾಗರಿಕರು: ಒಟ್ಟಾರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಗರ್ಭಿಣಿಯರು: ಮಗುವಿನ ಬೆಳವಣಿಗೆ ಹಾಗೂ ತಾಯಿಯ ಆರೋಗ್ಯಕ್ಕೆ ಹಾನಿಕಾರಕ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

ಇದನ್ನೂ ಓದಿ