ಹೊಸಕೆರೆಹಳ್ಳಿ ಮತಕೇಂದ್ರಕ್ಕೆ ಬಂದು ವೋಟ್ ಮಾಡಿದ ರಾಕಿಂಗ್ ಸ್ಟಾರ್ ಯಶ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನ ಹೊಸಕೆರೆಹಳ್ಳಿ (Hoskerehalli) ಮತಗಟ್ಟೆಗೆ ರಾಕಿಂಗ್ ಸ್ಟಾರ್ ಯಶ್ (Yash) ಬಂದು ಮತ ಚಲಾಯಿಸಿದರು. ಪತ್ನಿ ಬೇರೆ ಮತದಾನ ಕೇಂದ್ರದಲ್ಲಿ ಮತದಾನ ಮಾಡಿದ್ದರಿಂದ ಒಬ್ಬರೇ ಬಂದು ವೋಟ್ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಶ್, ‘ಜನರಿಗೆ ಎಲ್ಲರಿಗೂ ಗೊತ್ತಿದೆ. ವೋಟು ಮಾಡಬೇಕು ಅಂತ. ಮತದಾನ ಎನ್ನುವುದು ನಮ್ಮ ಹಕ್ಕು ಹಾಗೂ ಕರ್ತವ್ಯ. ಹಾಗಾಗಿ ನಾನು ಮಾಡಿದೆ. ಕಳೆದ ಬಾರಿ ಪ್ರಚಾರಕ್ಕೆ ಹೋಗುವುದಕ್ಕೆ ನನ್ನದೇ ಆದ ಕಾರಣವಿತ್ತು.
ಯಶೋಮಾರ್ಗದ ಮೂಲಕ ಕೆಲಸ ಮಾಡುತ್ತಿದ್ದೆ. ಈ ಬಾರಿ ಹೋಗಲು ಆಗಲಿಲ್ಲ. ಅದಕ್ಕೂ ಕಾರಣವಿದೆ’ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!