ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ (KL Rahul) ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಈ ಮೂಲಕ ಮುಂಬರುವ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ (Team India) ಆಡುವ ನಿರೀಕ್ಷೆ ಇದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಲ್ಲಿ ಬರೆದುಕೊಂಡಿರುವ ಅವರು, ನಾನು ಆರೋಗ್ಯವಾಗಿದ್ದೇನೆ. ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕಳೆದ ತಿಂಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವೇಳೆ ಲಕ್ನೋ ಪರ ಫೀಲ್ಡಿಂಗ್ ವೇಳೆ ರಾಹುಲ್ ಕಾಲಿನ ಗಾಯಕ್ಕೊಳಗಾಗಿದ್ದರು. ಇದರಿಂದಾಗಿ ನಂತರದ ಐಪಿಎಲ್ ಪಂದ್ಯಗಳಿಂದ ಅವರು ಹೊರಗುಳಿಯ ಬೇಕಾಯಿತು. ಅಲ್ಲದೆ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಿಂದಲೂ ಅವರು ದೂರ ಉಳಿಯುವ ಸಾಧ್ಯತೆಗಳಿವೆ.
ಅವರ ಅನುಪಸ್ಥಿತಿಯಲ್ಲಿ ಭಾನುವಾರದ ಐಪಿಎಲ್ ಪಂದ್ಯದಲ್ಲಿ ತಂಡವನ್ನು ಕೃನಾಲ್ ಪಾಂಡ್ಯ (Krunal Pandya) ಮುನ್ನಡೆಸಿದ್ದರು. ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಅವರ ಜಾಗವನ್ನು ಇಶಾನ್ ಕಿಶನ್ (Ishan Kishan) ತುಂಬಲಿದ್ದಾರೆ.