ಬ್ಲೂಟೂತ್ ಮೂಲಕ ಫೋಟೊಸ್ ಹ್ಯಾಕ್ ಆಗಿದೆ ಎಂದ ರೋಹಿಣಿ ಸಿಂಧೂರಿ ಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೂಪಾ ಮೌದ್ಗಿಲ್ ಅವರಿಗೆ ರೋಹಿಣಿ ಸಿಂಧೂರಿ ಕಂಡರೆ ಹೊಟ್ಟೆಕಿಚ್ಚು, ಹೀಗಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ, ರೋಹಿಣಿ ಅವರ ಪರ್ಸನಲ್ ವಿಚಾರ ಮಾತನಾಡೋದಕ್ಕೆ ಇವರು ಯಾರು ಎಂದು ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೂಪಾ ಅವರು ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ವ್ಯಕ್ತಿ, ಸಾಕಷ್ಟು ಫಾಲೋವರ‍್ಸ್ ಇದ್ದಾರೆ, ಇದನ್ನು ಹೆಚ್ಚುಮಾಡೋದಕ್ಕೆ, ಪ್ರಚಾರ ಪಡೆದುಕೊಳ್ಳೋಕೆ ಗಿಮಿಕ್ ಮಾಡಿದ್ದಾರೆ. ಕಾನೂನು ಹೋರಾಟಕ್ಕೆ ನಾನು ಸಿದ್ಧ ಎಂದಿದ್ದಾರೆ.

ನಮ್ಮದು ಸುಶಿಕ್ಷಿತ ಕುಟುಂಬ, ಈ ಆರೋಪದಿಂದಾಗಿ ಎಲ್ಲರೂ ನಮ್ಮ ಬಗ್ಗೆ ಮಾತನಾಡುವಂತಾಯ್ತು, ಬ್ಲೂಟೂತ್ ಮೂಲಕ ಫೋಟೊಗಳನ್ನು ಕದ್ದಿದ್ದಾರೆ. ನಾನು ಅಮೆರಿಕದಲ್ಲಿದ್ದೇನೆ, ನಮ್ಮ ಸಂಭಾಷಣೆ ಹಾಗೂ ಫೋಟೊಗಳನ್ನು ಕದ್ದಿದ್ದಾರೆ ದೂರು ನೀಡುತ್ತೇನೆ. ಎಲ್ಲ ಫೋಟೊಗಳೂ ಮಾಮೂಲಿ ಫೋಟೊಗಳಾಗಿವೆ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!