‘ಐಸಿಸಿ ವರ್ಷದ ಟೆಸ್ಟ್ ತಂಡ’: ಭಾರತದಿಂದ ರೋಹಿತ್, ಪಂತ್, ಅಶ್ವಿನ್ ಆಯ್ಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಸಿಸಿ ಗುರುವಾರ ಘೋಷಿಸಿರುವ​ 2021ರ ‘ಐಸಿಸಿ ವರ್ಷದ ಟೆಸ್ಟ್ ತಂಡ’ದಲ್ಲಿ ಭಾರತ ತಂಡದ ರೋಹಿತ್ ಶರ್ಮಾ, ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಆಫ್​ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವಕಾಶ ಪಡೆದುಕೊಂಡಿದ್ದಾರೆ.
ಇನ್ನು ಈ 11ರ ಬಳಗದ ನಾಯಕನಾಗಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಗೆದ್ದ ನ್ಯೂಜಿಲ್ಯಾಂಡ್​ ತಂಡದ ಕೇನ್​​ ವಿಲಿಯಮ್ಸನ್​ರನ್ನು ನೇಮಕ ಮಾಡಲಾಗಿದೆ.
ಆರಂಭಿಕರಾಗಿ ಶ್ರೀಲಂಕಾದ ದಿಮುತ್ ಕರುಣರತ್ನೆ 902 ರನ್​ಗಳಿಸಿದ್ದಾರೆ. ರೋಹಿತ್ ಶರ್ಮಾ 906 ರನ್​, ಆಸ್ಟ್ರೇಲಿಯಾದ ಮಾರ್ನಸ್​ ಲಾಬುಶೇನ್ 5 ಪಂದ್ಯಗಳಿಂದ 526 ರನ್​ಗಳಿಸಿ ಮೊದಲ ಮೂರು ಕ್ರಮಾಂಕದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ 1708 ರನ್​ ಸಿಡಿಸಿ 4ನೇ ಕ್ರಮಾಂಕದಲ್ಲಿದ್ದಾರೆ. 5ನೇ ಕ್ರಮಾಂದಲ್ಲಿ ನ್ಯೂಜಿಲ್ಯಾಂಡ್​ ತಂಡದ ನಾಯಕ ಕೇನ್ ವಿಲಿಯಮ್ಸನ್​ ಇದ್ದಾರೆ. 571 ರನ್​ಗಳಿಸಿರುವ ಪಾಕಿಸ್ತಾನದ ಫವಾದ್ ಆಲಮ್​ 6 ನೇ ಕ್ರಮಾಂಕದಲ್ಲಿದ್ದಾರೆ. ವಿಕೆಟ್ ಕೀಪರ್ ಸ್ಥಾನದಲ್ಲಿ ಭಾರತದ ರಿಷಭ್ ಪಂತ್ ಆಯ್ಕೆಯಾಗಿದ್ದಾರೆ.
ಬೌಲರ್​ಗಳ ವಿಭಾದಲ್ಲಿ 9 ಪಂದ್ಯಗಳಿಂದ 54 ವಿಕೆಟ್ ಮತ್ತು 355 ರನ್​ಗಳಿಸಿರುವ ರವಿಚಂದ್ರನ್ ಅಶ್ವಿನ್, 5 ಪಂದ್ಯಗಳಿಂದ 27 ವಿಕೆಟ್ ಮತ್ತು 105 ರನ್​ಗಳಿಸಿರುವ ಕಿವೀಸ್​ನ ಕೈಲ್ ಜೇಮಿಸನ್​ ಹಾಗೂ ಪಾಕಿಸ್ತಾನದ ಹಸನ್ ಅಲಿ ಮತ್ತು ಶಾಹೀನ್ ಅಫ್ರಿದಿ ಅವಕಾಶ ಪಡೆದಿದ್ದಾರೆ.
ಐಸಿಸಿ 2021ರ ಟೆಸ್ಟ್ ತಂಡ
ದಿಮುತ್ ಕರುಣರತ್ನೆ(ಶ್ರೀಲಂಕಾ), ರೋಹಿತ್ ಶರ್ಮಾ(ಭಾರತ), ಮಾರ್ನಸ್ ಲಾಬುಶೇನ್(ಆಸ್ಟ್ರೇಲಿಯಾ), ಜೋ ರೂಟ್​(ಇಂಗ್ಲೆಂಡ್​​), ಕೇನ್​ ವಿಲಿಯಮ್ಸನ್​(ನಾಯಕ,ನ್ಯೂಜಿಲ್ಯಾಂಡ್​​), ಫವಾದ್ ಆಲಮ್(ಪಾಕಿಸ್ತಾನ) ಮತ್ತು ರಿಷಭ್ ಪಂತ್(ಭಾರತ,ವಿಕೀ),ರವಿಚಂದ್ರನ್ ಅಶ್ವಿನ್(ಭಾರತ), ಕೈಲ್ ಜೇಮಿಸನ್​(ನ್ಯೂಜಿಲ್ಯಾಂಡ್),ಹಸನ್ ಅಲಿ(ಪಾಕಿಸ್ತಾನ) ಶಾಹೀನ್ ಅಫ್ರಿದಿ( ಪಾಕಿಸ್ತಾನ)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!