ಪಾಕಿಸ್ಥಾನದ ಲಾಹೋರ್ʼನಲ್ಲಿ ಬಾಂಬ್ ಸ್ಪೋಟ: 3 ಸಾವು, ಹಲವರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಕಿಸ್ತಾನದ ಲಾಹೋರ್ ನ ಅನಾರ್ಕಲಿ ಬಜಾರ್ ಪ್ರದೇಶದ ರಸ್ತೆ ಬದಿಯ ಮಳಿಗೆಗಳ ಬಳಿಯಲ್ಲಿ ಭೀಕರ ಬಾಂಬ್ ಸ್ಪೋಟಗೊಂಡಿದ್ದು, ಮೂವರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಘಟನ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಸ್ಫೋಟದ ಸ್ವರೂಪ ಪತ್ತೆಯಾಗಿಲ್ಲ. ವಿಧಿವಿಜ್ಞಾನ ತಂಡಗಳು ಸಮಯ-ಪ್ರಚೋದಿತ ಸುಧಾರಿತ ಸ್ಫೋಟಕ ಸಾಧನದ (ಐಇಡಿ) ಸಾಧ್ಯತೆಯನ್ನು ಪರಿಗಣಿಸುತ್ತಿವೆ ಮತ್ತು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!