ಟೆಸ್ಟ್ ಕ್ರಿಕೆಟ್‍ನಲ್ಲಿ 4,000 ರನ್‍ಗಳ ಗಡಿ ದಾಟಿದ ರೋಹಿತ್ ಶರ್ಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ (England) ವಿರುದ್ಧದ 4 ನೇ ಟೆಸ್ಟ್‌ನ 3ನೇ ದಿನದ ಪಂದ್ಯದಲ್ಲಿ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಮಾದರಿಯ ಕ್ರಿಕೆಟ್‍ನಲ್ಲಿ 4000 ರನ್‍ಗಳನ್ನು ಪೂರೈಸಿದ್ದಾರೆ.

ಈ ರನ್ ಗಡಿ ದಾಟಿದ ದೇಶದ 17ನೇ ಆಟಗಾರ ರೋಹಿತ್ ಶರ್ಮಾ ಆಗಿದ್ದು, ವೇಗವಾಗಿ ಈ ಸಾಧನೆ ಮಾಡಿದ 10ನೇ ಆಟಗಾರರಾಗಿದ್ದಾರೆ. ಟೀಂ ಇಂಡಿಯಾ ಆಟಗಾರ ವೀರೇಂದ್ರ ಸೆಹ್ವಾಗ್ ಕೇವಲ 79 ಇನ್ನಿಂಗ್ಸ್‌ಗಳಲ್ಲಿ 4000 ರನ್‍ಗಳನ್ನು ಗಳಿಸಿದ್ದರು.

2013ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ರೋಹಿತ್ ಇದುವರೆಗೆ ಭಾರತ ಪರ 58 ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಟೆಸ್ಟ್ ಕ್ರಿಕೆಟ್‍ನಲ್ಲಿ 44ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಅವರು 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ 212ರ ಅತ್ಯಧಿಕ ಸ್ಕೋರ್‌ನೊಂದಿಗೆ ದೀರ್ಘ ಸ್ವರೂಪದಲ್ಲಿ 11 ಶತಕಗಳು ಮತ್ತು 16 ಅರ್ಧಶತಕಗಳನ್ನು ಗಳಿಸಿದ್ದರು.

ಈ ಪಂದ್ಯದಲ್ಲಿ ರೋಹಿತ್ 21 ರನ್ ಗಳಿಸುವ ಮೂಲಕ 4,000 ರನ್ ಗಡಿ ಮುಟ್ಟಿದರು. ಈ ಸಾಧನೆಯೊಂದಿಗೆ, ಇಂಗ್ಲೆಂಡ್ ವಿರುದ್ಧ 1,000 ರನ್‍ಗಳನ್ನು ಪೂರೈಸಿದ್ದಾರೆ. ಅಲ್ಲದೇ ತವರಿನಲ್ಲಿ 2,200ಕ್ಕೂ ಹೆಚ್ಚು ರನ್‍ಗಳನ್ನು ಗಳಿಸಿದ್ದಾರೆ.

ವೇಗವಾಗಿ 4000 ಟೆಸ್ಟ್ ರನ್‍ಗಳಿಸಿದ ಟೀಂ ಇಂಡಿಯಾ ಆಟಗಾರರು

79 ಇನಿಂಗ್ಸ್ – ವೀರೇಂದ್ರ ಸೆಹ್ವಾಗ್
81 ಇನ್ನಿಂಗ್ಸ್ – ಸುನಿಲ್ ಗವಾಸ್ಕರ್
84 ಇನಿಂಗ್ಸ್ – ರಾಹುಲ್ ದ್ರಾವಿಡ್
84 ಇನಿಂಗ್ಸ್ – ಚೇತೇಶ್ವರ ಪೂಜಾರ
86 ಇನಿಂಗ್ಸ್ – ಸಚಿನ್ ತೆಂಡೂಲ್ಕರ್
88 ಇನಿಂಗ್ಸ್ – ಎಂ ಅಜರುದ್ದೀನ್
89 ಇನ್ನಿಂಗ್ಸ್ – ವಿರಾಟ್ ಕೊಹ್ಲಿ
96 ಇನಿಂಗ್ಸ್ – ಜಿ ವಿಶ್ವನಾಥ್
96 ಇನ್ನಿಂಗ್ಸ್ – ಗೌತಮ್ ಗಂಭೀರ್
99 ಇನಿಂಗ್ಸ್ – ಎಂ ಅಮರನಾಥ್
100 ಇನಿಂಗ್ಸ್ – ರೋಹಿತ್ ಶರ್ಮಾ*

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!