ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಆ ಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ
ಟೀಮ್ ಇಂಡಿಯಾ 4 ವಿಕೆಟ್ ನಷ್ಟಕ್ಕೆ 212 ರನ್ ಸಿಡಿಸಿತು.
ರೋಹಿತ್ ಶರ್ಮಾ ಕೇವಲ 65 ಎಸೆತದಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 5ನೇ ಸೆಂಚರು ದಾಖಲಿಸಿದ್ದಾರೆ. ಈ ಮೂಲಕ ಟಿ20 ಮಾದರಿಯಲ್ಲಿ ಗರಿಷ್ಠ ಶತಕ ಸಿಡಿಸಿದ ಕ್ರಿಕೆಟಿಗ ಅನ್ನೋ ದಾಖಲೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
ರೋಹಿತ್ ಶರ್ಮಾ 69 ಎಸೆತದಲ್ಲಿ ಅಜೇಯ 121 ರನ್ ಸಿಡಿಸಿದರು. ಈ ಮೂಲಕ ರೋಹಿತ್ ಶರ್ಮಾ ಟಿ20ಯಲ್ಲಿ ಗರಿಷ್ಠ ವೈಯುಕ್ತಿಕ ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. ರೋಹಿತ್ ಶರ್ಮಾ ಶತಕ, ರಿಂಕು ಸಿಂಗ್ ೬೯ ರನ್ ಜೊತೆಯಾಟದಿಂದ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 212 ರನ್ ಸಿಡಿಸಿತು. ಗೆಲುವಿಗೆ ಬೃಹತ್ ಟಾರ್ಗೆಟ್ ನೀಡಿದೆ.