ಶ್ರೀಲಂಕಾ ವಿರುದ್ಧ ಟಿ20 ಫೈಟ್: ಇದು ನಾಯಕ ರೋಹಿತ್‌ ಶರ್ಮಾಗೆ ಎರಡು ವಿಶ್ವ ದಾಖಲೆ ಬರೆಯುವ ಸರಣಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವೆಸ್ಟ್‌ ಇಂಡೀಸ್‌ ವಿರುದ್ಧ ಸರಣಿ ಗೆಲುವು ಸಾಧಿಸಿದ ಟೀಂ ಇಂಡಿಯಾ. ಈಗ ಶ್ರೀಲಂಕಾ ವನ್ನು ಸೋಲಿಸಲು ಸಜ್ಜಾಗುತ್ತಿದೆ.
ಇದರ ನಡುವೆ ತಂಡ ನಾಯಕ ರೋಹಿತ್‌ ಶರ್ಮಾ ಹೊಸ ದಾಖಲೆ ಮಾಡುವ ಹೊಸ್ತಿಲಲ್ಲಿದ್ದಾರೆ. ಇಂದು ನಡೆಯಲಿರುವ ಟಿ20 ಸರಣಿಯಲ್ಲಿ ರೋಹಿತ್‌ ಶರ್ಮಾ ಪಾಕಿಸ್ತಾನದ ಶೋಯೆಬ್‌ ಮಲಿಕ್‌ ರ ದಾಖಲೆಯನ್ನು ಮುರಿಯಲಿದ್ದಾರೆ.
ಇಡೀ ವಿಶ್ವದಲ್ಲಿ 100ಕ್ಕಿಂತ ಹೆಚ್ಚು ಟಿ20 ಆಡಿದ 9 ಆಟಗಾರರ ಪೈಕಿ 122 ಪಂದ್ಯಗಳನ್ನಾಡಿರುವ ರೋಹಿತ್‌ ಶರ್ಮ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಶೋಯೆಬ್‌ ಮಲಿಕ್‌ 124 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಈಗಾಗಲೇ ರೋಹಿತ್ ಶರ್ಮ ಭಾರತದ ಪರ ಅತಿ ಹೆಚ್ಚು ಟಿ-20 ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಮಹೇಂದ್ರ ಸಿಂಗ್‌ ಧೋನಿ 98, ವಿರಾಟ್‌ ಕೊಹ್ಲಿ 97 ಪಂದ್ಯಗಳನ್ನು ಆಡಿದ್ದಾರೆ.
ಇದೇ ವೇಳೆ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಮತ್ತೊಂದು ದಾಖಲೆ ಬರೆಯಲಿದ್ದಾರೆ. ಈಗ ನ್ಯೂಜಿಲೆಂಡ್‌ ನ ಮಾರ್ಟಿನ್‌ ಗುಪ್ಟಿಲ್‌ 112 ಪಂದ್ಯಗಳಲ್ಲಿ 3,299 ರನ್‌ ಗಳಿಸುವ ಮೂಲಕ ಮೊದಲ ಸ್ಥಾನ, 3,296 ರನ್‌ ಗಳನ್ನು ಪಡೆಯುವ ಮೂಲಕ ವಿರಾಟ್‌ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 122 ಪಂದ್ಯಗಳಿಂದ 3,263 ರನ್ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!