ಹಿಮಾಚಲ ಪ್ರದೇಶಕ್ಕೆ ರೋಪ್‌ವೇ, ಸುರಂಗಗಳು, ಶುದ್ಧ ಇಂಧನ ಯೋಜನೆ: ಕೇಂದ್ರ ಸಚಿವ ಗಡ್ಕರಿ ಭರವಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಚಾರ ಬಿರುಸುಗೊಂಡಿದೆ. ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರ್ಮೌರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಜನಕ್ ರಾಜ್ ಪರ ಗಡ್ಕರಿ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಅವರು,ಹಿಮಾಚಲ ಪ್ರದೇಶಕ್ಕೆ ರೋಪ್‌ವೇಗಳು, ಕೇಬಲ್ ರೈಲು ವ್ಯವಸ್ಥೆ, ಸುರಂಗಗಳು ಮತ್ತು ಶುದ್ಧ ಇಂಧನ ಯೋಜನೆಗಳ ಭರವಸೆಯನ್ನು ನೀಡಿದ್ದಾರೆ.

ಇಲ್ಲಿ ರಸ್ತೆಗಳನ್ನು ನಿರ್ಮಿಸುವುದು ಕಷ್ಟ. ಸುರಂಗ ಯೋಜನೆಗಳು, ರೋಪ್‌ವೇಗಳು ಮತ್ತು ಫ್ಯೂನಿಕ್ಯುಲರ್ ರೈಲು ವ್ಯವಸ್ಥೆಗಳ ಅವಶ್ಯಕತೆಯಿದೆ. ನಾವು ಈ ಪರ್ವತಗಳನ್ನು ವಿದ್ಯುತ್ ಸಾರಿಗೆ ವ್ಯವಸ್ಥೆಯ ಮೂಲಕ ಸಂಪರ್ಕಿಸಲು ಸಾಧ್ಯವಾದರೆ, ಇವುಗಳು ನಿಮ್ಮ ಪ್ರಯಾಣವನ್ನು ಸುಗಮಗೊಳಿಸುತ್ತದೆ ಮತ್ತು ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದರು.

ಪಠಾಣ್‌ಕೋಟ್-ಭರ್ಮೌರ್ ಹೆದ್ದಾರಿ ಯೋಜನೆಗೆ ಸಹ ಅನುಮೋದನೆ ನೀಡಲಾಗಿದೆ ಮತ್ತು ನಿಮ್ಮ ಪ್ರಯಾಣವನ್ನು ಸುಗಮಗೊಳಿಸಲು ಉತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ನಾನು ಭರವಸೆ ನೀಡುತ್ತೇನೆ ಎಂದು ಗಡ್ಕರಿ ಹೇಳಿದರು.

ಹಿಮಾಚಲ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳು ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಇಲ್ಲಿ ಸೌರ ಮೇಲ್ಛಾವಣಿ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು, ಇದು ಎಲೆಕ್ಟ್ರಿಕ್ ಕಾರುಗಳು, ಬಸ್‌ಗಳು ಮತ್ತು ಆಟೋ-ರಿಕ್ಷಾಗಳಿಗೆ ಶಕ್ತಿ ನೀಡುತ್ತದೆ ಎಂದು ಅವರು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!