RECIPE| ದೇಹದಲ್ಲಿರುವ ಶಾಖವನ್ನು ಕಡಿಮೆ ಮಾಡುವ‌ ಈ ಜ್ಯೂಸ್ ತಯಾರಿಸುವುದು ಕಷ್ಟವೇನಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವರಿಗೆ ಚಳಿಗಾಲದಲ್ಲೂ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಅದಕ್ಕಾಗಿ ಕೂಲ್ ಡ್ರಿಂಕ್ಸ್ ಮತ್ತು ಇತರ ತಂಪು ಪಾನೀಯಗಳನ್ನು ಕುಡಿಯುವ ಮೂಲಕ ದೇಹದ ತೂಕವೂ ಹೆಚ್ಚಾಗುತ್ತದೆ. ಹೆಚ್ಚಾಗಿ ಹೊರಗಡೆ ಜ್ಯೂಸ್‌ಗಳನ್ನು ಕುಡಿಯುವುದರಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಯೂ ಹೆಚ್ಚು. ಹಾಗಾಗಿ ಮನೆಯಲ್ಲಿಯೇ ಈ ಜ್ಯೂಸ್‌ ತಯಾರಿಸಿ ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಿ.

ಈ ಜ್ಯೂಸ್ ಹೆಸರು ರೋಸ್ ಆಪಲ್ ಜ್ಯೂಸ್..

ಬೇಕಾಗುವ ಪದಾರ್ಥಗಳು

ರೋಸ್ ಸೇಬು, ಅಲೋವೆರಾ ತಿರುಳು, ಜೇನು, ನಿಂಬೆ ರಸ, ಸಣ್ಣ ತುಂಡು ಶುಂಠಿ

ಮಾಡುವ ವಿಧಾನ

ಮೊದಲು ಅಲೋವರೆ ಸಿಪ್ಪೆ ತೆಗೆದು ತಿರುಳನ್ನು ತುಂಡುಗಳಾಗಿ ಕತ್ತರಿಸಿ. ಇದಕ್ಕೆ 6 ತುಂಡು ಗುಲಾಬಿ ಸೇಬು ಮತ್ತು ಒಂದು ತುಂಡು ಶುಂಠಿ ಸೇರಿಸಿ.. ಸ್ವಲ್ಪ ನೀರು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ. ಈ ರಸವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು, ಸಾಕಷ್ಟು ತಣ್ಣೀರು ಸೇರಿಸಿ ಮತ್ತು ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಮಿಶ್ರಣ ಮಾಡಿ. ಈ ಜ್ಯೂಸ್ ಅನ್ನು ದಿನಾಲೂ ಕುಡಿದರೆ ಹೊಟ್ಟೆಯಲ್ಲಿನ ಶಾಖ ಮಾಯವಾಗಿ ಅನೇಕ ರೋಗಗಳು ದೂರವಾಗುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!