Friday, June 2, 2023

Latest Posts

ಸ್ಲೀಪರ್ ಬಸ್ ನಲ್ಲಿ ಅಕ್ರಮವಾಗಿ ಸಾಗಾಟವಾಗ್ತಿತ್ತು ಬರೋಬ್ಬರಿ 300 ಲೀಟರ್ ಗೋವಾ ಮದ್ಯ!!

ಹೊಸದಿಗಂತ ವರದಿ ಜೋಯಿಡಾ:

ವಿಧಾನಸಭಾ ಚುನಾವಣಾ ಮುಂಜಾಗ್ರತಾ ಕ್ರಮವಾಗಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಸ್ಲೀಪರ್ ಬಸ್‌ನಲ್ಲಿ ಬರೋಬ್ಬರಿ 319 ಲೀಟರ್ ಗೋವಾ ಮದ್ಯ ಸಿಕ್ಕಿದೆ. ಇದರ ಅಂದಾಜು ಬೆಲೆ 34,32,610 ರೂಪಾಯಿಗಳಾಗಿದೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು, ಕಾರವಾರದ ಅಬಕಾರಿ ಉಪ ಆಯುಕ್ತರಾದ ಜಗದೀಶ್ ಎನ್.ಕೆ. ಹಾಗೂ ಯಲ್ಲಾಪುರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಶಂಕರಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ವಾಹನ ತಪಾಸಣೆ ಮಾಡಲಾಗಿದೆ.

ರಾತ್ರಿ 9:45ರ ಸುಮಾರಿಗೆ ಸ್ಲೀಪರ್ ಬಸ್‌ವೊಂದರಲ್ಲಿ 319ಲೀಟರ್ ಗೋವಾ ಮದ್ಯ ದೊರೆತಿದೆ. ಪರಶುರಾಮ ಸಿದ್ದಪ್ಪ ಕುರಿ, ಚಂದ್ರಯ್ಯ, ಮನು ಕೆ.ಬಿ ಎಂಬುವವರನ್ನು ದಸ್ತಗಿರಿ ಮಾಡಲಾಗಿದ್ದು, ವಾಹನ ಮಾಲೀಕರ ಪತ್ತೆಹಚ್ಚಬೇಕಿದೆ.

ತಪಾಸಣೆ ವೇಳೆ ಅಬಕಾರಿ ಉಪನಿರೀಕ್ಷಕ ರಾದಶ್ರೀ ಶ್ರೀಕಾಂತ ಬಿ ಅಸೂದೆ ಅಬಕಾರಿ ಪೇದೆಗಳಾದ ಶ್ರೀ ಬಾಲಕೃಷ್ಣ ಕೆ ಶ್ರೀ ಆರ್ ಎನ್ ನಾಯಕಶ್ರೀ ಯು ಎನ್ ತುಳಜಿ. ಹಾಗೂಪೊಲೀಸ ಉಪ ನಿರೀಕ್ಷಕರಾದ ಕೃಷ್ಣಕಾಂತ ಪಾಟೀಲ, ಸಹಾಯಕ ಪೊಲೀಸ ಉಪ ನಿರೀಕ್ಷಕರಾದ ಚಂದ್ರಶೇಖರ ಗುಣಗಿ ,ಪೇದೆಗಳಾದ ರಾಜು ರಾಠೋಡ,ರಾಜು ಚಲವಾದಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!