ಮುದ್ದಾದ ಹೆಣ್ಣು ಮಗುವಿನ ಸ್ವಾಗತದ ಖುಷಿಯಲ್ಲಿದ್ದಾರೆ ತೇಜಸ್ವಿ ಯಾದವ್ ದಂಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಿಹಾರ ರಾಜ್ಯದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ಮಗಳು ಹುಟ್ಟಿದ್ದಾಳೆ. ಇದು ಅವರ ಮೊದಲ ಮಗುವಾಗಿದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಈ ಕುರಿತು ಯಾದವ್ ಟ್ವೀಟ್‌ ಮಾಡಿದ್ದು, ಮುದ್ದಾದ ಮಗಳೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಗುವನ್ನೇ ದಿಟ್ಟಿಸಿ ನೋಡುತ್ತಿರುವ ಅವರು ಭಾವುಕರಾದಂತೆ ತೋರುತ್ತಾರೆ.

ದೇವರು ನನಗೆ ಮಗಳ ರೂಪದಲ್ಲಿ ಉಡುಗೊರೆಯನ್ನು ಕಳುಹಿಸಿದ್ದಾರೆ ಎಂದು ಯಾದವ್ ಬರೆದುಕೊಂಡಿದ್ದಾರೆ.

ಯಾದವ್ ತಮ್ಮ ಬಾಲ್ಯದ ಸ್ನೇಹಿತೆ ರಾಜಶ್ರೀ ಅವರನ್ನು ವಿವಾಹವಾಗಿದ್ದು, ಮೊದಲ ಮಗುವನ್ನು ಅವರು ಇದೀಗ ಸ್ವಾಗತಿಸಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ಈ ಬಗ್ಗೆ ಟ್ವೀಟ್‌ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಮೊದಲ ಮಗುವನ್ನು ಸ್ವಾಗತಿಸಿರುವ ಬಿಹಾರದ ಉಪಮುಖ್ಯಮಂತ್ರಿಗೆ ಶುಭಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!