ದಸರಾ ಹಬ್ಬಗಳಿಗೆ ಸಾಲು ಸಾಲು ರಜೆ: ಖಾಸಗಿ ಬಸ್​ಗಳ ದುಬಾರಿ ಪ್ರಯಾಣ ದರಕ್ಕೆ ಅಂಕುಶ ಎಂದ ಸಚಿವ ಶ್ರೀರಾಮುಲು

ಹೊಸದಿಗಂತ ಡಿಜಿಟಲ್ ಡೆಸ್ಕ್:ಯಿಂದ

ದಸರಾ ಹಬ್ಬಗಳಿಗೆ ಸಾಲು ಸಾಲು ರಜೆಗಳಿದ್ದಾಗ ಖಾಸಗಿ ಬಸ್​ಗಳು ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸಾರಿಗೆ ಸಂಸ್ಥೆಗಳಿಂದಲೇ ಹೆಚ್ಚುವರಿ ಬಸ್​ಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ. ಎಂ ಸತೀಶ್ ಪ್ರಶ್ನೆಗೆ ಉತ್ತರಿಸಿದ ಅವರು, ಹಬ್ಬಗಳು, ಸರಣಿ ರಜೆಗಳು ಬಂದಾಗ ಖಾಸಗಿ ಬಸ್ ನವರು ಪ್ರಯಾಣ ದರವನ್ನು ಸಾಕಷ್ಟು ಹೆಚ್ಚಿಗೆ ಮಾಡುತ್ತಾರೆ. ದುಬಾರಿ ದರ ವಸೂಲಿ ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್​ಗಳನ್ನು ಸಾರಿಗೆ ನಿಗಮದಿಂದ ಒದಗಿಸಲಾಗುತ್ತದೆ ಎಂದರು.

ಬಿಎಂಟಿಸಿಯಲ್ಲಿರುವ ಎಲ್ಲ ಹಳೇ ಬಸ್​ಗಳನ್ನು ನವೀಕರಣಗೊಳಿಸಲಾಗುತ್ತಿದೆ ಹಾಗೂ ಎಲೆಕ್ಟ್ರಿಕ್ ಬಸ್​ಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!