ರಷ್ಯಾ-ಉಕ್ರೇನ್ ಮಧ್ಯೆ ಶಾಶ್ವತ ಶಾಂತಿ ಸ್ಥಾಪಿಸಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ: ಮೆಕ್ಸಿಕೊ ವಿಶ್ವಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಮತ್ತು ಉಕ್ರೇನ್ ಮಧ್ಯೆ ಶಾಶ್ವತ ಶಾಂತಿ ಸ್ಥಾಪಿಸುವ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಅವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಬೇಕೆಂದು ಮೆಕ್ಸಿಕೊ ಕೇಳಿಕೊಂಡಿದೆ.

ನ್ಯೂಯಾರ್ಕ್​ನಲ್ಲಿ ನಡೆದ ಉಕ್ರೇನ್ ಮೇಲಿನ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮೆಕ್ಸಿಕೊ ವಿದೇಶಾಂಗ ಸಚಿವ ಮಾರ್ಸೆಲೊ ಲೂಯಿಸ್ ಕಾಸಾಬಾನ್ ಈ ಬೇಡಿಕೆ ಮಂಡಿಸಿದರು.

ಶಾಂತಿ ಸ್ಥಾಪಿಸಲು ಅಂತಾರಾಷ್ಟ್ರೀಯ ಸಮುದಾಯವು ತನ್ನ ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಶಾಂತಿಪ್ರಿಯ ದೇಶವಾಗಿರುವ ಮೆಕ್ಸಿಕೊ ಬಯಸುತ್ತದೆ ಎಂದು ಕಾಸಾಬಾನ್ ಹೇಳಿದರು.

ಉಜ್ಬೆಕಿಸ್ತಾನದ ಸಮರಕಂಡ್​ನಲ್ಲಿ ನಡೆದ 22ನೇ ಶಾಂಘೈ ಸಹಕಾರ ಒಕ್ಕೂಟದ ಸಭೆಯ ಪಾರ್ಶ್ವದಲ್ಲಿ ಮೋದಿ ಹಾಗೂ ಪುಟಿನ್ ಭೇಟಿಯಾಗಿದ್ದರು. ಈ ವೇಳೆ ಇಂದಿನ ಕಾಲ ಯುದ್ಧ ಮಾಡುವ ಕಾಲವಲ್ಲ ಎಂದು ಮೋದಿ ಪುಟಿನ್ ಅವರಿಗೆ ಹೇಳಿದ್ದು ಗಮನಾರ್ಹ. ಮೋದಿ ಅವರ ಸಲಹೆಯನ್ನು ಅಮೆರಿಕ, ಫ್ರಾನ್ಸ್​ ಮತ್ತು ಯುನೈಟೆಡ್ ಕಿಂಗ್ ಡಮ್ ಸೇರಿದಂತೆ ಹಲವಾರು ರಾಷ್ಟ್ರಗಳು ಸ್ವಾಗತಿಸಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!