ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನ ರಾಯಲ್ಸ್ (RR) ಹಾಗೂ ಗುಜರಾತ್ ಟೈಟನ್ಸ್ ನಡುವೆ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ RR ತಂಡವು ನಿಗದಿತ ಅವಧಿಯೊಳಗೆ ಓವರ್‌ಗಳನ್ನು ಪೂರೈಸದ ಕಾರಣಕ್ಕೆ ನಾಯಕ ಸಂಜು ಸ್ಯಾಮ್ಸನ್ ಗೆ ದಂಡ ವಿಧಿಸಲಾಗಿದೆ.
ನಿನ್ನೆ ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ 58 ರನ್ ಅಂತರದಲ್ಲಿ ಸೋಲಿಗೆ ಶರಣಾಗಿತ್ತು. ಇದರೊಂದಿಗೆ ಈಗ ದಂಡ ವಿಧಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಋತುವಿಯಲ್ಲಿ ರಾಜಸ್ಥಾನ ತಂಡವು ಎರಡನೇ ಸಲ ಈ ತಪ್ಪು ಮಾಡಿರುವ ಕಾರಣ 2.2 ಕಲಮಿನಡಿ ₹24 ಲಕ್ಷ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಾಧ್ಯಮ ಪ್ರಕಟಣೆ ತಿಳಿಸಿದೆ. ಇಂಪ್ಯಾಕ್ಟ್ ಆಟಗಾರ ಸೇರಿದಂತೆ ತಂಡದಲ್ಲಿ ಆಡುವ ಹನ್ನೊಂದರ ಬಳಗದ ಇತರೆ ಆಟಗಾರರ ಮೇಲೆ ₹6 ಲಕ್ಷ ಅಥವಾ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಗಿದೆ.