ಗಲ್ಲಾಪೆಟ್ಟಿಗೆಯಲ್ಲಿ ದೂಳೆಬ್ಬಿಸುತ್ತಿದೆ ‘ಆರ್​ಆರ್​ಆರ್​’ ಸಿನಿಮಾ: ಮೂರೂ ದಿನಗಳಲ್ಲಿ ಎಷ್ಟು ಕಲೆಕ್ಷನ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್​ಆರ್​ಆರ್​’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದೂಳೆಬ್ಬಿಸುತ್ತಿದೆ. ಮಾ.25ರಂದು ಅದ್ದೂರಿಯಾಗಿ ವಿಶ್ವಾದ್ಯಂತ ‘ಆರ್​ಆರ್​ಆರ್’​ ಸಿನಿಮಾ ರಿಲೀಸ್​ ಆಯಿತು.
ಮಾ.25ರಂದು ಅದ್ದೂರಿಯಾಗಿ ವಿಶ್ವಾದ್ಯಂತ ರಿಲೀಸ್​ ಆದ ಸಿನಿಮಾ ಮೂರೂ ದಿನಗಳಲ್ಲಿ ಬಾಕ್ಸ್​ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.
ತೆಲುಗಿನಲ್ಲಿ ಸಿದ್ಧವಾದ ಈ ಚಿತ್ರ ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗೆ ಡಬ್​ ಆಗಿ ತೆರೆ ಕಂಡಿದೆ. ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಅವರ ವೃತ್ತಿಜೀವನಕ್ಕೆ ಒಳ್ಳೆಯ ಮೈಲೇಜ್​ ಸಿಕ್ಕಿದೆ. ಆಲಿಯಾ ಭಟ್​ ಮತ್ತು ಅಜಯ್​ ದೇವಗನ್​ ಅವರು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮೊದಲ ದಿನವೇ ‘ಆರ್​ಆರ್​ಆರ್​’ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿತು. ಶುಕ್ರವಾರ ವಿಶ್ವಾದ್ಯಂತ 223 ಕೋಟಿ ರೂಪಾಯಿ ಕಮಾಯಿ ಆಗಿದೆ ಎಂದು ವರದಿ ಆಗಿತ್ತು. ಮೂರು ದಿನ ಕಳೆಯುವುದರೊಳಗೆ 500 ಕೋಟಿ ರೂಪಾಯಿ ಗಡಿ ಮುಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!