ಡಿಕೆ- ಶಹಬಾಜ್ ಅಬ್ಬರ;‌ ರಾಜಸ್ಥಾನ ವಿರುದ್ಧ ಆರ್ಸಿಬಿಗೆ ರೋಚಕ ಜಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ಗಳಾದ ದಿನೇಶ್‌ ಕಾರ್ತಿಕ್‌ ಹಾಗೂ ಶಹಬಾಜ್‌ ಅಹ್ಮದ್‌ ಅಮೋಘ ಆಟದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ವಿಕೆಟ್​ಗಳ ರೋಚಕ ಜಯ ದಾಖಲಿಸಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 13ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಕಣಕ್ಕಿಳಿದ ಆರ್ಸಿಬಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿತು.
ಬ್ಯಾಟಿಂಗ್‌ ಗೆ ಇಳಿದ ರಾಜಸ್ಥಾನವು ಜೋಸ್ ಬಟ್ಲರ್ (70) ಅವರ ಅರ್ಧಶತಕದ ನೆರವಿನಿಂದ ಆರ್ಸಿಬಿಗೆ 170 ರನ್​ಗಳ ಟಾರ್ಗೆಟ್ ನೀಡಿತು.
ಗುರಿ ಬೆನ್ನತ್ತಿದ ಆರ್​ಸಿಬಿಗೆ ಆರಂಭಿಕ ಜೋಡಿಮಧ್ಯಮಕ್ರಮಾಂಕದ ಬ್ಯಾಟ್ಸ್‌ ಮನ್‌ ಗಳಾದ ದಿನೇಶ್‌ ಕಾರ್ತಿಕ್‌ ಹಾಗೂ ಶಹಬಾಜ್‌ ಅಹ್ಮದ್‌ ಅಮೋಘ ಆಟದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ವಿಕೆಟ್​ಗಳ ರೋಚಕ ಜಯ ದಾಖಲಿಸಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 13ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಕಣಕ್ಕಿಳಿದ ಆರ್ಸಿಬಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಗೆ ಇಳಿದ ರಾಜಸ್ಥಾನವು ಜೋಸ್ ಬಟ್ಲರ್ (70) ಅವರ ಅರ್ಧಶತಕದ ನೆರವಿನಿಂದ ಆರ್ಸಿಬಿಗೆ 170 ರನ್​ಗಳ ಟಾರ್ಗೆಟ್ ನೀಡಿತು.
ಗುರಿ ಬೆನ್ನತ್ತಿದ ಆರ್​ಸಿಬಿಗೆ ಡುಪ್ಲೆಸಿಸ್‌ ಹಾಗೂ ಅನುಜ್‌ ರಾವತ್‌ ಮೊದಲ ವಿಕೆಟ್‌ ಗೆ ಅರ್ಧಶತಕದ ಜೊತೆಯಾಟ ನೀಡಿದರು. ಬಳಿಕ ಹಠಾತ್‌ ಕುಸಿತ ಕಂಡ ಆರ್​ಸಿಬಿ 87 ರನ್​ಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹ್ಮದ್ ಅಬ್ಬರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕಾರ್ತಿಕ್‌ (44) ಹಾಗೂ ಶಹಬಾಜ್ ಅಹ್ಮದ್ (45) ಇನ್ನೂ ಐದು ಎಸೆತಗಳಿರುವಂತೆಗೆ ತಂಡವನ್ನು ಗೆಲುಔಿನ ದಡ ಮುಟ್ಟಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!