ಒಟಿಟಿ ಗೂ ಲಗ್ಗೆ ಇಟ್ಟ ‘ಆರ್​ಆರ್​ಆರ್​’ ಸಿನಿಮಾ: ಆದರೆ ಇಲ್ಲಿದೆ ಟ್ವಿಸ್ಟ್…ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಮೌಳಿ ನಿರ್ದೇಶನದ ಬ್ಲಾಕ್​ಬಸ್ಟರ್​ ಸಿನಿಮಾ ‘ಆರ್​ಆರ್​ಆರ್​’ ಎಲ್ಲೆಡೆ ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದು ಗೊತ್ತೇ ಇದೆ. ಇದೀಗ ಈ ಸಿನಿಮಾ ಒಟಿಟಿ ಪ್ಲಾಟ್​ಫಾರ್ಮ್​ಗೆ ತರಲು ಸಿದ್ದವಾಗಿದ್ದು, . ಮೇ 20ರಂದು ಸಿನಿಮಾ ಒಟಿಟಿಗೂ ಲಗ್ಗೆ ಇಡಲಿದೆ.
ಸ್ಟಾರ್​ ನಟರಾದ ರಾಮ್​ಚರಣ್​, ಜೂನಿಯರ್​ ಎನ್​ಟಿಆರ್ ನಟನೆಯ ಆರ್​ಆರ್​ಆರ್​ ಸಿನಿಮಾ ಈಗಾಗಲೇ ಅಭಿಮಾನಿಗಳು ಮೆಚ್ಚಿಗೊಂಡಿದ್ದು, ಒಟಿಟಿಯಲ್ಲಿ ಸಿನಿಮಾವನ್ನು ಯಾವಾಗ ಬಿಡುಗಡೆ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಮೇ 20ರಂದು ಒಟಿಟಿಗಳಾದ ಜಿ5 ಮತ್ತು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ.
ರಿಲೀಸ್ ಗೂ ಟ್ವಿಸ್ಟ್ :
ಜಿ5 ಮತ್ತು ನೆಟ್​ಫ್ಲಿಕ್ಸ್​ನಲ್ಲಿ ಆರ್​ಆರ್​ಆರ್​ ಸಿನಿಮಾ ಬರುತ್ತಿದೆ. ಆದರೆ, ಸಿನಿಮಾ ವಿತರಕರು ಇದರಲ್ಲಿ ಒಂದು ಟ್ವಿಸ್ಟ್​ ಇಟ್ಟಿದ್ದು, ಈಗಾಗಲೇ ಒಟಿಟಿಯ ಚಂದಾದಾರಿಕೆ ಹೊಂದಿದ್ದರೂ ಈ ಸಿನಿಮಾವನ್ನು ವೀಕ್ಷಿಸಲು ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗಿದೆ.
ಒಂದು ವೇಳೆ ಸಿನಿಮಾವನ್ನು ಪ್ರತ್ಯೇಕವಾಗಿ ಹಣ ಪಾವತಿ ಮಾಡಲು ಬಯಸದೇ ಇದ್ದಲ್ಲಿ ನೀವು ಜೂನ್​ 3ರವರೆಗೂ ಕಾಯಬೇಕಾಗುತ್ತದೆ. ಜೂನ್​ 3ರ ಬಳಿಕ ಆಯಾ ಒಟಿಟಿಗಳಲ್ಲಿ ಸಹಜವಾಗಿ ಸ್ಟ್ರೀಮಿಂಗ್​ ಆಗಲಿದೆ. ಆಗ ಅದು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!