2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಬೂಸ್ಟರ್ ಡೋಸ್: ಅಂತಿಮ ಪ್ರಯೋಗದ ಅನುಮತಿ ಕೋರಿದ ಭಾರತ್​ ಬಯೋಟೆಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೋನಾ ಲಸಿಕೆ ವಿತರಣೆ ಶೀಘ್ರದಲ್ಲೇ ಆರಂಭವಾಗಲಿದೆ. ಭಾರತ್ ಬಯೋಟೆಕ್​ ತನ್ನ ಕೋವ್ಯಾಕ್ಸಿನ್​ ಅನ್ನು 2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ‘ಬೂಸ್ಟರ್ ಡೋಸ್’ ಆಗಿ ನೀಡುವ ಕುರಿತು ಅಂತಿಮ ಪ್ರಯೋಗಕ್ಕೆ ಅನುಮತಿ ನೀಡಬೇಕು ಎಂದು ಡ್ರಗ್ಸ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ(ಡಿಜಿಸಿಎ)ಗೆ ಪ್ರಸ್ತಾವನೆ ಸಲ್ಲಿಸಿದೆ.
ಕೊವ್ಯಾಕ್ಸಿನ್​ ಲಸಿಕೆಯ ಎರಡನೇ ಮತ್ತು ಮೂರನೇ (ಅಂತಿಮ) ಪ್ರಯೋಗಗಳನ್ನು ಮಾಡಲು ಡಿಸಿಜಿಐಗೆ ಭಾರತ್​ ಬಯೋಟೆಕ್​ ಅನುಮತಿ ಕೋರಿದೆ. ಈ ಸಂಬಂಧ ಭಾರತ್ ಬಯೋಟೆಕ್ ಏಪ್ರಿಲ್ 29ರಂದು ಅರ್ಜಿಯನ್ನೂ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ಪ್ರಯೋಗದ ಅಂತಿಮ ಹಂತದ ಭಾಗವಾಗಿ, ಲಸಿಕೆ ಸುರಕ್ಷತೆ, ಪ್ರತಿಕೂಲ ಪರಿಣಾಮಗಳು ಮತ್ತು ರೋಗನಿರೋಧಕ ಶಕ್ತಿಯಂತಹ ವಿಷಯಗಳ ಕುರಿತು ಭಾರತ್​ ಬಯೋಟೆಕ್ ಸ್ವಯಂಸೇವಕರನ್ನು ಹುಡುಕುತ್ತಿದೆ. ಅಂತಿಮ ಪ್ರಯೋಗಗಳು ದೇಶಾದ್ಯಂತ 6 ಸ್ಥಳಗಳಲ್ಲಿ ನಡೆಸುವ ಸಾಧ್ಯತೆಯಿದೆ. ಜೊತೆಗೆ ಎರಡನೇ ಮತ್ತು ಮೂರನೇ ಪ್ರಯೋಗಗಳನ್ನು ದೆಹಲಿ ಏಮ್ಸ್ ಮತ್ತು ಪಾಟ್ನಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಸಲಾಗುವುದು ಎಂದು ಕಂಪನಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!