ಆಸ್ಕರ್ ಕಣದಲ್ಲಿ ಆರ್‌ಆರ್‌ಆರ್‌: ಅಧಿಕೃತವಾಗಿ ಘೋಷಿಸಿದ ಚಿತ್ರತಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿರ್ದೇಶಕ ರಾಜಮೌಳಿ ಅವರ `ಆರ್‌ಆರ್‌ಆರ್’ ಚಿತ್ರ ದೇಶವಷ್ಟೇ ಅಲ್ಲ ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದು ಗೊತ್ತೇ ಇದೆ. ಇಂತಹ ಜನಪ್ರಿಯ ಚಿತ್ರ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಭಾರತ ಸರ್ಕಾರ ಗುಜರಾತಿ ಸಿನಿಮಾವನ್ನು ಆಸ್ಕರ್‌ಗೆ ನಾಮನಿರ್ದೇಶನ ಮಾಡಿದೆ.

ಆರ್‌ಆರ್‌ಆರ್‌ನ ಆಸ್ಕರ್ ಕನಸುಗಳು ಭಗ್ನಗೊಂಡಿದ್ದರಿಂದ ಎಲ್ಲರೂ ನಿರಾಸೆಯ ಕಡಲಲಲಿ ತೇಲಿದ್ದರು. ಆಸ್ಕರ್ ಅಕಾಡೆಮಿಯ ನಿಯಮಗಳ ಪ್ರಕಾರ, ಯಾವುದೇ ಚಲನಚಿತ್ರ ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಒಂದು ವಾರದವರೆಗೆ ‘ಲಾಸ್ ಏಂಜಲೀಸ್’ನಲ್ಲಿ ಪ್ರದರ್ಶಿಶನವಾಗುತ್ತದೆಯೋ ಆ ಚಿತ್ರ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗುತ್ತದೆ. ಹಾಗಾಗಿ RRRಚಿತ್ರತಂಡ  “For Your Consideration” ಅಡಿಯಲ್ಲಿ 15 ವಿಭಾಗಗಳಲ್ಲಿ ನಾಮನಿರ್ದೇಶನ ಮಾಡಿದೆ.

‘ಅತ್ಯುತ್ತಮ ಚಿತ್ರ’, ‘ಅತ್ಯುತ್ತಮ ನಿರ್ದೇಶಕ’, ‘ಅತ್ಯುತ್ತಮ ನಟ’ (ಎನ್‌ಟಿಆರ್ ಮತ್ತು ರಾಮ್ ಚರಣ್), ‘ಅತ್ಯುತ್ತಮ ಪೋಷಕ ನಟ’ (ಅಜಯ್ ದೇವಗನ್), ‘ಬೆಸ್ಟ್‌ ಒರಿಜಿನಲ್ ಸ್ಕೋರ್’ (ಎಂಎಂ ಕೀರವಾಣಿ) ಎಂದು ರಾಜಮೌಳಿ ಪುತ್ರ ಕಾರ್ತಿಕೇಯ ತಮ್ಮ ಟ್ವಿಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ಈ ಸುದ್ದಿ ಕೇಳಿ RRR ಪ್ರೇಕ್ಷಕರು ಖುಷಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!