Tuesday, June 28, 2022

Latest Posts

ಅದ್ಧೂರಿಯಾಗಿ ನಡೆಯಲಿದೆ ಆರ್‌ಆರ್‌ಆರ್‌ ಚಿತ್ರದ ಪ್ರೀ-ರಿಲೀಸ್‌ ಕಾರ್ಯಕ್ರಮ! ಹೇಗಿದೆ ತಯಾರಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2022ರ ಬಹುನಿರೀಕ್ಷಿತ ಚಿತ್ರ ಆರ್‌ ಆರ್‌ ಆರ್‌ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗುತ್ತಿದ್ದು, ವಿವಿಧ ರಾಜ್ಯಗಳಲ್ಲಿ ಪ್ರಚಾರದ ಭರಾಟೆ ಭಾರೀ ಸದ್ದು ಮಾಡುತ್ತಿದೆ. ಇದೀಗ ಮಾ.19ಕ್ಕೆ ಕರ್ನಾಟಕದಲ್ಲಿ ಪ್ರಚಾರಕ್ಕಾಗಿ ಪ್ರೀ ರಿಲೀಸ್‌ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಾ.19ರ ಸಂಜೆ ಚಿಕ್ಕಬಳ್ಳಾಪುರದ ಅಗಲಗುರ್ಕಿ ಯಲ್ಲಿ ಅದ್ಧೂರಿ ಪ್ರಿ ರಿಲೀಸ್‌ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಯುತ್ತಿದೆ.
52 ಸಾವಿರ ಚದುರ ಅಡಿಯ ಬೃಹತ್‌ ಎಲ್‌ ಇಡಿ ಸ್ಕ್ರೀನಗ, 42 ಲೇಸರ್‌ ಲೈಟ್‌ ಗಳು ಸೇರಿ ಒಟ್ಟು 100 ಎಕರೆ ಜಾಗದ ಬೃಹತ್‌ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.
ಇನ್ನು ಈ ಕಾರ್ಯಕ್ರಮವನ್ನು ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಗೆ ಆರ್‌ ಆರ್‌ ಆರ್‌ ಚಿತ್ರತಂಡ ಅರ್ಪಿಸುತ್ತಿದೆ. ಅಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಜ್ಯೂ. ಎನ್‌ ಟಿಆರ್‌, ರಾಮಚರಣ್‌, ರಾಕಿಂಗ್‌ ಸ್ಟಾರ್‌ ಯಶ್‌ ಸೇರಿದಂತೆ ಸಾಕಷ್ಟು ತಾರೆಯರು ವೇದಿಕೆ ಮೇಲೆ ಇರಲಿದ್ದಾರೆ. ಹಾಗಾಗಿ ಈ ಕಾರ್ಯಕ್ರಮಕ್ಕೆ ಅಭಿಮಾನಿಗಳ ದಂಡು ಸೇರುವ ಸಾಧ್ಯತೆ ಇದೆ ಎಂದು ಚಿತ್ರತಂಡ ನಿರೀಕ್ಷಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss