ನೀರಿನ ಬಾಟಲಿಗೆ 5 ರೂಪಾಯಿ ಹೆಚ್ಚಿಗೆ ಪಡೆದ ಐಆರ್‌ಸಿಟಿಸಿ ಗುತ್ತಿಗೆದಾರನಿಗೆ ಒಂದು ಲಕ್ಷ ರೂ. ದಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಣಿಕರಿಗೆ ಮಾರಾಟ ಮಾಡುವ ಕುಡಿಯುವ ನೀರಿನ ಬಾಟಲಿಗೆ ನಿಗದಿತ ದರಕ್ಕಿಂತ ಐದು ರೂಪಾಯಿ ಹೆಚ್ಚಿಗೆ ಪಡೆದ ಐಆರ್‌ಸಿಟಿಸಿ ಗುತ್ತಿಗೆದಾರನಿಗೆ ಒಂದು ಲಕ್ಷ ರೂ. ದಂಡ ವಿಧಿಸಲಾಗಿದೆ.

ಉತ್ತರ ಪ್ರದೇಶದ ಗೋಂಡಾ ಪ್ರದೇಶದ ಗುತ್ತಿಗೆದಾರ ಚಂದ್ರಮೌಳಿ ಮಿಶ್ರಾಗೆ ಭಾರತೀಯ ರೈಲ್ವೆ ದಂಡ ವಿಧಿಸಲಾಗಿದೆ. ಕುಡಿಯುವ ನೀರಿನ ಬಾಟಲಿಗೆ 15 ರೂಪಾಯಿ ಎಂಆರ್‌ಪಿ ಇದ್ದರೂ, 20 ರೂಪಾಯಿ ಪಡೆಯಲಾಗಿದೆ ಎಂದು ಗ್ರಾಹಕರೊಬ್ಬರು ಟ್ವೀಟ್ ಮಾಡಿದ್ದರು. ಇದನ್ನು ಗಮನಿಸಿದ ಮ್ಯಾನೇಜರ್ ಗುತ್ತಿಗೆದಾರರ ವಿರುದ್ಧ ದೂರು ದಾಖಲಿಸಿದ್ದಾರೆ. ಪರವಾನಗಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿ ನಂತರ ಗುತ್ತಿಗೆದಾರನಿಗೆ ಒಂದು ಲಕ್ಷ ರೂ ದಂಡ ವಿಧಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!