ಸ್ಥಾಪನೆಯಾದ ಮೊದಲ ವರ್ಷದಲ್ಲೇ ಪಿಎಂ ಕೇರ್ಸ್‌ ಫಂಡ್‌ ನಲ್ಲಿ ಸಂಗ್ರಹವಾದ ಹಣವೆಷ್ಟು? ಇಲ್ಲಿದೆ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ನಂತಹ ಸಾಂಕ್ರಾಮಿಕಗಳನ್ನು ನಿಭಾಯಿಸಲು ಹಣ ಸಂಗ್ರಹಕ್ಕೆಂದು ಪ್ರಾರಂಭಿಸಲಾದ ಪಿಎಂ ಕೇರ್ಸ್‌ ಫಂಡ್‌ ನಲ್ಲಿ 2021ರ ಮಾರ್ಚ್‌ ವರೆಗೆ 10,999 ಕೋಟಿ ರೂ. ಸಂಗ್ರಹವಾಗಿದೆ.
ಕೋವಿಡ್‌ ಪರಿಸ್ಥಿತಿ ಸುಧಾರಿಸಲು, ಪರಿಹಾರಕ್ಕೆ ಅಗತ್ಯವಿರುವ ಕಡೆಗಳಲ್ಲಿ ಬಳಕೆಗೆ ಈ ನಿಧಿಯಲ್ಲಿನ ಹಣವನ್ನು ಬಳಸಲಾಗುತ್ತದೆ. ಈ ನಿಧಿಯನ್ನು ಪ್ರಧಾನಿ ನರೇಂದ್ರ ಮೋದಿ 2020ರಲ್ಲಿ ಸ್ಥಾಪಿಸಿದ್ದು, 2020 ರಿಂದ 2021ರವರೆಗೆ ಒಟ್ಟು 10,999 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ ಮತ್ತು ಅದರಲ್ಲಿನ 3,976 ಕೋಟಿ ರೂ ವೆಚ್ಚಮಾಡಲಾಗಿದೆ ಎಂದು ಪಿಎಂ ಕೇರ್‌ ಫಂಡ್‌ ತಿಳಿಸಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಪಿಎಂ ಕೇರ್ಸ್‌ ಫಂಡ್‌ ನ ಮೂಲಕ 9 ರಾಜ್ಯಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ 50ಸಾವಿರ ವೆಂಟಿಲೇಟರ್‌ಗಳಿಗೆ 1,311 ಕೋಟಿ ರೂ ವೆಚ್ಚ ಮಾಡಲಾಗಿದೆ. ಇನ್ನು ಮುಜಾಫರ್‌ ಪುರ ಹಾಗೂ ಪಟ್ನದಲ್ಲಿ 500 ಹಾಸಿಗೆಗಳ 2 ಕೋವಿಡ್‌ ಆಸ್ಪತ್ರೆಗಳ ಸ್ಥಾಪನೆಗೆ 50 ಕೋಟಿ ರೂ. ನೀಡಲಾಗಿದೆ.
ಇನ್ನು ಆಮ್ಲಜನಕ ಘಟಕಗಳಿಗೆ 201.58 ಕೋಟಿ ರೂ. ಖರ್ಚು ಮಾಡಲಾಗಿದೆ. ಪ್ರಮುಖವಾಗಿ 6.6 ಕೋಟಿ ಕೋವಿಡ್‌ ಲಸಿಕೆ ಡೋಸ್‌ ಗಳ ಖರೀದಿಗೆ 1392.82 ಕೋಟಿ ರೂ. ಬಳಸಲಾಗಿದೆ ಎಂದು ಅಧಿಕೃತ ವೆಬ್‌ ಸೈಟ್‌ ನಲ್ಲಿ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!