ಹಿರಿಯ ಸಾಹಿತಿ ಚನ್ನವೀರ ಕಣವಿ ನಿಧನಕ್ಕೆ ಆರ್.ಎಸ್.ಎಸ್. ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಕನ್ನಡನಾಡು ಕಂಡ ಶ್ರೇಷ್ಠ ಕವಿಗಳು ಹಾಗೂ ಹಿರಿಯ ಸಾಹಿತಿ ಚನ್ನವೀರ ಕಣವಿ ಅವರ ನಿಧನದಿಂದಾಗಿ‌ ಕನ್ನಡ ಸಾಹಿತ್ಯ ಲೋಕವು ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಂತಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

‘ಸಮನ್ವಯ ಕವಿ’ ಎಂದೇ ಕರೆಯಲ್ಪಡುತ್ತಿದ್ದ ಚನ್ನವೀರ ಕಣವಿಯವರು ಮೃದುಮಾತಿನ, ಸ್ನೇಹಭಾವದ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು. ತಮ್ಮ ಕವನ – ಲೇಖನ – ಭಾಷಣಗಳಲ್ಲಿ ಅವರ ಸಾಮಾಜಿಕ ಕಳಕಳಿ, ರಾಷ್ಟ್ರೀಯ ವಿಚಾರಗಳ ವಿಶ್ಲೇಷಣೆ, ಸಮಾಜ ಹಿತದ ಆಶಯಗಳು ವ್ಯಕ್ತವಾಗುತ್ತಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ನಾಡಿನ ವಿವಿಧ ಪ್ರಶಸ್ತಿ ಪುರಸ್ಕೃತರಾಗಿದ್ದ ಕಣವಿಯವರು ಅನೇಕ ಯುವ ಬರಹಗಾರರಿಗೆ ಸದಾ ಸ್ಫೂರ್ತಿ, ಮಾರ್ಗದರ್ಶಕರು.

ರಾಷ್ಟ್ರೀಯ ಸ್ವಯಸೇವಕ ಸಂಘದೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದ ಚನ್ನವೀರ ಕಣವಿಯವರು ನಮ್ಮ ಸ್ವಯಂಸೇವಕರಿಗೆ ಪ್ರೋತ್ಸಾಹ – ಸಹಕಾರ ನೀಡುತ್ತಿದ್ದರು.

ಅವರ ನಿಧನ ನಮಗೆಲ್ಲರಿಗೂ ಶೋಕ ತಂದಿದೆ. ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಾ, ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ಪ್ರಾರ್ಥಿಸುವುದಾಗಿ ಆರ್.ಎಸ್.ಎಸ್. ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!