ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ಪ್ರದೀಪ್ ರಾವ್ ಕೇತ್ಕರ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್

ನಾಸಿಕ್: ನಾಸಿಕ್ ಮಹಾನಗರದ ಹಿರಿಯ ಸ್ವಯಂಸೇವಕ ಮತ್ತು ಸಹ ಸಂಘಚಾಲಕ್ ಪ್ರದೀಪ್ ರಾವ್ ಕೇತ್ಕರ್ (73) ಅವರು ಇಂದು ಬೆಳಗ್ಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಿಧನರಾದರು. ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು.

ಪ್ರದೀಪ್ ರಾವ್ ಈ ಹಿಂದೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಸಂಘಚಾಲಕ್ ಆಗಿದ್ದು, ಸಂಸ್ಕಾರ ಭಾರತಿಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು. ಅನೇಕ ಸಂದರ್ಭಗಳಲ್ಲಿ ಅವರು ತಮ್ಮ ಬಾಲ್ಯದಿಂದಲೂ ತಾಯಿ ಭಾರತಿಯ ಸೇವೆ ಮಾಡಲು ಆರ್‌ಎಸ್‌ಎಸ್ ಅವರನ್ನು ಹೇಗೆ ಪ್ರೇರೇಪಿಸಿತು ಎಂಬುದನ್ನು ವಿವರಿಸುತ್ತಿದ್ದರು. ಈ ಮೂಲಕ ಪ್ರದೀಪ್ ರಾವ್ ಸಾವಿರಾರು ಸ್ವಯಂಸೇವಕರಿಗೆ ದೇಶ ಸೇವೆಯ ಮಾರ್ಗದೆಡೆಗೆ ಮಾರ್ಗದರ್ಶನ ನೀಡಿ ಗುರುವಿನ ಸ್ಥಾನದಲ್ಲಿದ್ದರು.

ಆರ್‌ಎಸ್‌ಎಸ್‌ನ ಆಂಗ್ಲ ಭಾಷಾ ಸಾಪ್ತಾಹಿಕ ‘ಆರ್ಗನೈಸರ್’ನ ಸಂಪಾದಕ ಪ್ರಫುಲ್ಲ ಕೇತ್ಕರ್ ಅವರು ಟ್ವಿಟರ್‌ನಲ್ಲಿ ತಮ್ಮ ತಂದೆಯ ನಿಧನದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ನಾಳೆ (ಮಾ. 3) ನಾಸಿಕ್‌ನಲ್ಲಿ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!