ಆಳಂದ ಪಟ್ಟಣದ ಕೋಮು ಗಲಭೆ: 10 ಮಹಿಳೆಯರು ಸೇರಿದಂತೆ 167 ಜನರ ಬಂಧನ

ಹೊಸದಿಗಂತ ವರದಿ,ಕಲಬುರಗಿ:

ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದಗಾ೯ದಲ್ಲಿನ ರಾಘವ ಚೈತನ್ಯ ಶಿವಲಿಂಗ ಅಪವಿತ್ರ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಹಿಂದೂ ಸಂಘಟನೆಗಳು ಗಂಗಾ ಜಲದಿಂದ ಶಿವಲಿಂಗ ಶುದ್ದೀಕರಣಕ್ಕೆ ತೆರಳಿದಾಗ ಅನ್ಯ ಕೋಮಿನ ಜನರು ಗಲಭೆ ಸೃಷ್ಟಿ ಮಾಡಿ,ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳಂದ ಠಾಣೆಯ ಪೋಲಿಸರು 10 ಜನ ಮಹಿಳೆಯರು ಸೇರಿದಂತೆ ಒಟ್ಟು 167 ಜನರನ್ನು ಬಂಧಿಸಲಾಗಿದೆ ಎಂದು ಕಲಬುರಗಿ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂಥ ಹೇಳಿದ್ದಾರೆ.
ಅವರು ಮಾದ್ಯಮದವರೊಂದಿಗೆ ಮಾತನಾಡಿ, ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದಗಾ೯ದಲ್ಲಿ ಪೂಜೆ ಸಲ್ಲಿಸಲು ಅವಕಾಶ ಕೊಡುವುದಾಗಿ ಹೇಳಿ, ನಂತರ ಕೋಮು ಗಲಭೆ ಎಬ್ಬಿಸಿದ ಕಿಡಿಗೇಡಿಗಳ ಕಾಲ ಡಿಟೇಲ್ ಹಾಗೂ ಲೋಕೆಶನ ಆಧಾರದ ಮೇಲೆ ಬಂಧಿಸಲು ಕಾಯಾ೯ಚರಣೆ ಮಾಡಲಾಗುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!