Friday, March 24, 2023

Latest Posts

ಸರ್ಕಾರಿ ಬಸ್ ಪಲ್ಟಿಯಾಗಿ ಹಲವರಿಗೆ ಗಾಯ: ಇಬ್ಬರ ಸ್ಥಿತಿ ಚಿಂತಾಜನಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಮಂಗಳವಾರ ಮಧ್ಯರಾತ್ರಿ ಬಳಿಕ ಸರ್ಕಾರಿ ಸಾರಿಗೆ ಗರುಡ ಬಸ್ ಪಲ್ಟಿಯಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಎನ್ ಟಿಆರ್ ಜಿಲ್ಲೆಯ ಚಿಲ್ಲಕಲ್ಲು ಟೋಲ್ ಪ್ಲಾಜಾ ಬಳಿ ಗರುಡ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ 12ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅದರಲ್ಲಿ ಇಬ್ಬರ ಸ್ಥಿತಿ ವಿಷಮವಾಗಿದೆ.

ಬಸ್ ಸಂಖ್ಯೆ ಎಪಿ 16 ಜೆಡಿ 0599 ವಿಜಯವಾಡದಿಂದ ಮಿಯಾಪುರಕ್ಕೆ (ಹೈದರಾಬಾದ್) ಹೋಗುತ್ತಿದ್ದು, ಚಿಲ್ಲಕಲ್ಲು ಟೋಲ್ ಪ್ಲಾಜಾ ಬಳಿ ಬಂದಾಗ ಹೆಡ್‌ಲೈಟ್‌ನಲ್ಲಿ ಸಮಸ್ಯೆಯಿಂದಾಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಬಸ್ ಅನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಒಂದು ಬದಿಗೆ ಉರುಳಿದೆ. ಟೋಲ್ ಪ್ಲಾಜಾ ಸಿಬ್ಬಂದಿ ಮತ್ತು ಹೆದ್ದಾರಿ ಪೊಲೀಸರು ತಕ್ಷಣ ಸ್ಪಂದಿಸಿ ಬಸ್ಸಿನ ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ಹೊರಕ್ಕೆ ಕರೆತಂದರು.

ಗಾಯಾಳುಗಳನ್ನು ಸಮೀಪದ ಜಗ್ಗಯ್ಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ ಪ್ರಯಾಣಿಕರನ್ನು ವಿಜಯವಾಡ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಪ್ರಯಾಣಿಕರನ್ನು ಮತ್ತೊಂದು ಬಸ್ ಮೂಲಕ ಹೈದರಾಬಾದ್‌ಗೆ ಕರೆದೊಯ್ಯಲಾಯಿತು. ಘಟನೆ ಕುರಿತು ಆರ್‌ಟಿಸಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!