Thursday, July 7, 2022

Latest Posts

ಕೇದಾರನಾಧ ಯಾತ್ರಿಕರಿಗೆ ಸಂಕಷ್ಟ, ರುದ್ರಪ್ರಯಾಗದಲ್ಲಿ ಎಲ್ಲೋ ಅಲರ್ಟ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಸ್ತುತ ನಡೆಯುತ್ತಿರುವ ಕೇದಾರನಾಥ ಯಾತ್ರೆಗೆ ವರುಣ ಮತ್ತೆ ಅಡ್ಡಯನ್ನುಂಟುಮಾಡಿದ್ದಾನೆ. ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರುದ್ರಪ್ರಯಾಗ ಜಿಲ್ಲಾಡಳಿತ ಹಳದಿ ಎಚ್ಚರಿಕೆ ನೀಡಿದೆ. ರುದ್ರಪ್ರಯಾಗ, ಉತ್ತರಕಾಶಿ, ಚಮೋಲಿ, ಬಾಗೇಶ್ವರ ಮತ್ತು ಪಿಥೋರಗಢದಲ್ಲಿ ಮೇ 20 ರವರೆಗೆ ಮಿಂಚು, ಬಲವಾದ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಚಾರ್‌ಧಾಮ್‌ ಯಾತ್ರೆಗಾಗಿ ದೇಶ-ವಿದೇಶಗಳಿಂದ ಯಾತ್ರಾರ್ಥಿಗಳು ಆಗಮಿಸುತ್ತಿದ್ದು, ಮಳೆ ಪರಿಣಾಮ ಉತ್ತರಾಖಂಡ್‌ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ವರುಣನ ಆರ್ಭಟದಿಂದ ಯಾತ್ರಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಡಳಿತ ಪರದಾಡುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss