69 ವರ್ಷದ ಬಳಿಕ ಮೊದಲ ಬಾರಿಗೆ ಮತ ಚಲಾಯಿಸಿದ ರುಕ್ಮಿಣಿಬಾಯಿ!

ಹೊಸದಿಗಂತ ವರದಿ ಕೊಪ್ಪಳ:

ಜನಿಸಿದ 18 ವರ್ಷಕ್ಕೆ ಮತದಾನದ ಹಕ್ಕು ಎಲ್ಲರಿಗೂ ದೊರಕಿರುತ್ತದೆ. ಕೆಲವರು ಕೆಲ ಕಾರಣಕ್ಕೆ ಮತದಾನ ಮಾಡಿರುವುದಿಲ್ಲ. ಅದರಂತೆ ಕೊಪ್ಪಳದಲ್ಲೂ ಓರ್ವ ಮಹಿಳೆ ತಮ್ಮ 69 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಮತ ಚಲಾಯಿಸಿ ಗಮನ ಸೆಳೆದಿದ್ದಾರೆ.

ಹೌದು, ಕೊಪ್ಪಳದ ಕಲ್ಯಾಣ ನಗರದ ನಿವಾಸಿ ರುಕ್ಮಿಣಿಬಾಯಿ ವಿಠ್ಠಲಾಚಾರ್ಯ ನರಗುಂದ ಎಂಬ 69 ವರ್ಷದ ಮಹಿಳೆ ಇದೇ ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ. 146ನೇ ಮತಗಟ್ಟೆಗೆ ತಮ್ಮ ಮಗನೊಂದಿಗೆ ತೆರಳಿದ ಅವರು ಹಕ್ಕು ಚಲಾಯಿಸಿದ್ದಾರೆ.

ಪ್ರತಿ ಚುನಾವಣೆಯಲ್ಲಿ ಮತದಾನದಿಂದ ದೂರ ಇದ್ದ ಇವರು ಈ ಬಾರಿ ಕೊಪ್ಪಳ ಕ್ಷೇತ್ರದಲ್ಲಿ ಮಹಿಳೆಗೆ ಅವಕಾಶ ನೀಡಿದ್ದು ಮತ್ತು ಮೋದಿಯವರ ಕಾರ್ಯ ಮೆಚ್ಚಿ ಮತ‌ ಹಾಕಿರುವುದಾಗಿ ರುಕ್ಮಿಣಿಬಾಯಿ ಹೇಳಿದ್ದಾರೆ. ಮನೆಯವರೆಲ್ಲ ಪ್ರತಿಸಲ ಮತ ಹಾಕುವಂತೆ ಹೇಳಿದ್ದರೂ ಹಾಕಿರಲಿಲ್ಲ. ಆದರೆ ಈ ಬಾರಿ ಮಹಿಳೆ ಗೆಲ್ಲುವಲ್ಲಿ ನನ್ನ ಮತವೂ ಪರಿಗಣನೆ ಆಗಲಿ ಎಂಬ ಸದುದ್ದೇಶದಿಂದ ನನ್ನ ಹಕ್ಕು ಚಲಾಯಿಸಿರುವೆ. ಬಿಜೆಪಿ ಮಹಿಳೆಗೆ ಅವಕಾಶ ನೀಡಿದ್ದು ಹಾಗೂ ಜಗತ್ತೇ ಮೆಚ್ಚುವಂತೆ ಕೆಲಸ ಮಾಡಿದ ಮೋದಿಯವರ ಆಡಳಿತ ಮೆಚ್ಚಿಕೊಂಡು ಅವರ ಕೈ ಬಲಪಡಿಸಲು ಮೊದಲ ಬಾರಿಗೆ ಮತ ಹಾಕಿರುವೆ. ಇದು ನನಗೆ ಅತ್ಯಂತ ಸಂತಸ ತಂದ ದಿನವಾಗಿದೆ ಎಂದು ರುಕ್ಮಿಣಿಬಾಯಿ ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!