ಹೊಸದಿಗಂತ ಡಿಜಿಟಲ್ ಡೆಸ್ಕ್ :
ರೋಹಿಣಿ ಸಿಂಧೂರಿ (Rohini Sindhuri) ಹಾಗೂ ರೂಪಾ (D. Roopa) ನಡುವಿನ ವಾಕ್ ಸಮರಕ್ಕೆ ಇದೀಗ ಬ್ರೇಕ್ ಬಿದ್ದಿದ್ದು, ಇಬ್ಬರೂ ಪರಸ್ಪರ ಮಾತನಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ರೋಹಿಣಿ ವಿರುದ್ಧ ರೂಪಾ ಮಾತನಾಡದಂತೆ ನಿರ್ಬಂಧ ಹೇರಿ ಕೋರ್ಟ್ ಆದೇಶ ನೀಡಿದೆ.
ರೂಪಾ ವಿರುದ್ಧ ರೋಹಿಣಿ ಕೋರ್ಟ್ ಮೆಟ್ಟಿಲೇರಿದ್ರು. ನನ್ನ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕು ಎಂದಿದ್ರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ (Court) ಕೊನೆಗೂ ರೂಪಾಗೆ ಬ್ರೇಕ್ ಹಾಕಿದ್ದು ಬಹಿರಂಗವಾಗಿ ಎಲ್ಲೂ ಮಾತನಾಡದಂತೆ ತಡೆಯಾಜ್ಞೆಯನ್ನು ನೀಡಿದೆ.