ತುಸು ಚೇತರಿಸಿಕೊಂಡ ರುಪಾಯಿ: ಡಾಲರ್‌ ವಿರುದ್ಧ 67 ಪೈಸೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಡಾಲರ್ ತನ್ನ ಎತ್ತರದ ಮಟ್ಟದಿಂದ ಹಿಮ್ಮೆಟ್ಟಿದ್ದರಿಂದ ಗುರುವಾರ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 67 ಪೈಸೆ ಏರಿಕೆಯಾಗಿ 82.14 ಕ್ಕೆ ತಲುಪಿದೆ.

ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ಘಟಕವು ಡಾಲರ್‌ಗೆ 82.15 ನಲ್ಲಿ ಪ್ರಾರಂಭವಾಯಿತು, ನಂತರ 82.14 ನಲ್ಲಿ ಮುಕ್ತಾಯಗೊಂಡು, ಅದರ ಹಿಂದಿನ ಮುಕ್ತಾಯಕ್ಕಿಂತ 67 ಪೈಸೆಯ ಏರಿಕೆಯನ್ನು ದಾಖಲಿಸಿತು.

ಆರು ಕರೆನ್ಸಿಗಳ ಬುಟ್ಟಿಯ ವಿರುದ್ಧ ಗ್ರೀನ್‌ಬ್ಯಾಕ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.06 ರಷ್ಟು ಏರಿಕೆಯಾಗಿ 109.76 ಕ್ಕೆ ತಲುಪಿದೆ.
ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 90 ಯುಎಸ್‌ ಡಾಲರ್‌ ನಿಂದ ರಿಂದ 94 ಯುಎಸ್‌ ಡಾಲರ್‌ ಗೆ ಏರಿಕೆಯಾಗಲಿದೆ ಎನ್ನಲಾಗಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 95.94 ಯುಎಸ್‌ ಡಾಲರ್ ಅಂದರೆ 0.26 ರಷ್ಟು ಏರಿಕೆಯಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!