ಡಾಲರ್‌ ಎದುರು ರೂಪಾಯಿ 9 ಪೈಸೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಂತರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್‌ ದುರ್ಬಲಗೊಂಡಿದ್ದರಿಂದ ಹಾಗು ದೇಶೀಯ ಷೇರುಗಳ ಸಕಾರಾತ್ಮಕ ಪ್ರವೃತ್ತಿಯಿಂದಾಗಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 9 ಪೈಸೆ ಏರಿಕೆಯಾಗಿ 82.31 ಕ್ಕೆ ತಲುಪಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ಡಾಲರ್ ವಿರುದ್ಧ ರೂಪಾಯಿಯು 82.36 ಆರಂಭಿಕ ಬೆಲೆಯಲ್ಲಿ ಪ್ರಾರಂಭವಾಯಿತು. ನಂತರ 82.31 ಕ್ಕೆ ಏರಿ ಅದರ ಹಿಂದಿನ ಮುಕ್ತಾಯಕ್ಕಿಂತ 9 ಪೈಸೆಯ ಏರಿಕೆಯನ್ನು ದಾಖಲಿಸಿತು.

ಶುಕ್ರವಾರ ಯುಎಸ್ ಕರೆನ್ಸಿ ಎದುರು ರೂಪಾಯಿ 82.40 ಕ್ಕೆ ಕೊನೆಗೊಂಡಿತ್ತು.

ಏತನ್ಮಧ್ಯೆ, ಆರು ಕರೆನ್ಸಿಗಳ ವಿರುದ್ಧ ಡಾಲರ್‌ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.11 ರಷ್ಟು ಕುಸಿದು 103 ಕ್ಕೆ ತಲುಪಿದೆ.

ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ, 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 220.99 ಪಾಯಿಂಟ್‌ಗಳು ಅಥವಾ 0.38 ಶೇಕಡಾ ಏರಿಕೆಯಾಗಿ 57,748.09 ಪಾಯಿಂಟ್‌ಗಳಿಗೆ ತಲುಪಿದೆ. NSE ನಿಫ್ಟಿ50ಯು 76.10 ಪಾಯಿಂಟ್ ಅಥವಾ 0.45 ಶೇಕಡಾದಷ್ಟು ಏರಿಕೆಯಾಗಿ 17,021.15 ಅಂಕಗಳಿಗೆ ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!