ಉಕ್ರೇನ್‌ನ ಪ್ರಮುಖ ನಗರಗಳಲ್ಲಿ ಯುದ್ಧವಿರಾಮ ಘೋಷಿಸಿದ ರಷ್ಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್‌ನ ಖಾರ್ಕೀವ್, ಕೀವ್ ಸೇರಿ ನಾಲ್ಕು ಪ್ರದೇಶಗಳಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದೆ. ಮಧ್ಯಾಹ್ನ 12:30 ರಿಂದ (ಭಾರತೀಯ ಕಾಲಮಾನ) ಕದನ ವಿರಾಮ ಆರಂಭವಾಗಲಿದೆ. ಕೀವ್,ಮರಿಯುಪೋಲ್, ಖಾರ್ಕೀವ್, ಸುಮಿ ನಗರಗಳಲ್ಲಿ ಮಾನವೀಯ ನೆಲೆ ಮೇರೆಗೆ ಕದನ ವಿರಾಮ ಘೋಷಣೆಯಾಗಿದೆ.

ಈ ಪ್ರದೇಶಗಳಲ್ಲಿ ಬಹಳಷ್ಟು ನಾಗರಿಕರು ಸಿಲುಕಿಕೊಂಡಿದ್ದು, ಇವರನ್ನು ರಕ್ಷಿಸುವ ಸಲುವಾಗಿ ಮಾನವೀಯ ಕಾರಿಡಾರ್‌ಗಳನ್ನು ತೆರೆಯಬೇಕಿದೆ. ಈ ಕಾರಣದಿಂದ ಕದನ ವಿರಾಮ ಘೋಷಣೆ ಮಾಡಿದ್ದೇವೆ ಎಂದು ರಷ್ಯಾ ಹೇಳಿದೆ.

ಮಾನವೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಎಮನ್ಯಾನುಯೆಲ್ ಮ್ಯಾಕ್ರನ್ ಅವರ ವೈಯಕ್ತಿಕ ಕೋರಿಗೆ ಮೇರೆಗೆ ಕದನ ವಿರಾಮ ಘೋಷಿಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!