ಪುಟಿನ್‌ ರಿವೇಂಜ್‌: ಕಮಲಾ ಹ್ಯಾರಿಸ್‌, ಜುಕರ್‌ ಬರ್ಗ್‌ಗೆ ರಷ್ಯಾ ಪ್ರವೇಶಿಸದಂತೆ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿರುವ ಹಿನ್ನೆಲೆಯಲಿ ಹಲವು ದೇಶಗಳು ರಷ್ಯಾ ವಿರುದ್ಧ ನಿರ್ಬಂಧಗಳನ್ನು ವಿಧಿಸಿವೆ. ಅದರ ಭಾಗವಾಗಿ ಪುಟಿನ್‌ ಇದೀಗ ದೊಡ್ಡ ಬ್ಲಾಕ್‌ ಲಿಸ್ಟ್‌ ರೆಡಿ ಮಾಡಿದ್ದಾರೆ. ಲಿಸ್ಟ್‌ನಲ್ಲಿರುವವರು ರಷ್ಯಾಗೆ ಬರುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ಇದೀಗ ಆ ಕಪ್ಪು ಪಟ್ಟಿಯಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೆಸರೂ ಸೇರ್ಪಡೆಯಾಗಿದೆ. ಹ್ಯಾರಿಸ್ ರಷ್ಯಾ ಪ್ರವೇಶಿಸದಂತೆ ನಿಷೇಧ ಹೇರುವುದಾಗಿ ಪುಟಿನ್ ಘೋಷಿಸಿದ್ದಾರೆ.

ಜೊತೆಗೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೂಡ ರಷ್ಯಾ ಪ್ರವೇಶಿಸದಂತೆ ತಾಕೀತು ಮಾಡಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ. ಇವರಷ್ಟೇ ಅಲ್ಲದೆ ಜಗತ್ತಿನ ಇತರೆ ರಾಷ್ಟ್ರಗಳ ಹಲವರು ಕೂಡ ಈ ಕಪ್ಪು ಪಟ್ಟಿಗೆ ಸೇರಿದ್ದಾರಂತೆ.

ಜುಕರ್‌ಬರ್ಗ್ ಮತ್ತು ಹ್ಯಾರಿಸ್ ಸೇರಿದಂತೆ ಇತರ ಗಣ್ಯರಿಗೆ ಅನಿರ್ದಿಷ್ಟಾವಧಿಯವರೆಗೆ ರಷ್ಯಾ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ. ಲಿಂಕ್ಡ್‌ಇನ್ ಸಿಇಒ ಲಿಂಕ್‌ಡಿನ್ ರಿಯಾನ್ ರೋಸ್ಲಾನ್ಸ್‌ಕಿ ಕೂಡಾ ರಷ್ಯಾ ನಿಷೇಧಿಸಿದವರಲ್ಲಿ ಸೇರಿದ್ದಾರೆ. “ರಷ್ಯನ್ ಫೋಬಿಕ್” ಕಾರ್ಯಸೂಚಿಯನ್ನು ಪ್ರಚಾರ ಮಾಡಲು ಒಪ್ಪದ ಪತ್ರಕರ್ತರಿಗೂ ಕೂಡಾ ನಿಷೇಧ ಹೇರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!