ಯುರೋಪ್‌ನ ಅತಿದೊಡ್ಡ ನೈಸರ್ಗಿಕ ಅನಿಲ ಪೈಪ್‌ಲೈನ್ ಮುಚ್ಚಿದ ರಷ್ಯಾ: ಅನಿಲ ಬಿಕ್ಕಟ್ಟು ತಲೆದೂರುವ ಭೀತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಷ್ಯಾ ಉಕ್ರೇನ್‌ ಯುದ್ಧ ಪರಿಣಾಮಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಯೂರೋಪಿಯನ್‌ ರಾಷ್ಟ್ರಗಳಿಗೆ ಮತ್ತೊಂದು ಆಘಾತ ಎದುರಾಗಿದೆ.
ರಷ್ಯಾದಲ್ಲಿರುವ ಯುರೋಪ್‌ನ ಅತಿದೊಡ್ಡ ನೈಸರ್ಗಿಕ ಅನಿಲ ಪೈಪ್‌ಲೈನ್ ಆದ ನಾರ್ಡ್ ಸ್ಟ್ರೀಮ್- 1 ಅನ್ನು ರಷ್ಯಾ ನಿರ್ವಹಣೆಯ ಕಾರಣ ನೀಡಿ ಸೋಮವಾರ ಮುಚ್ಚಿದೆ. ಆದರೆ ರಷ್ಯಾ ತಾನು ಭರವಸೆ ನೀಡಿದಂತೆ, ಮುಂದಿನ 10 ದಿನಗಳಲ್ಲಿ ಪೈಪ್‌ಲೈನ್ ಮತ್ತೆ ತೆರೆಯುತ್ತದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
ರಷ್ಯಾ ಉಕ್ರೇನ್‌ ಮೇಲೆ ಸಮರ ಸಾರಿದಾಗ ಅನೇಕ ಯೂರೋಪಿಯನ್‌ ರಾಷ್ಟ್ರಗಳು ರಷ್ಯಾದ ಮೇಲೆ ಆರ್ಥಿಕ ದಿಗ್ಭಂಧನ ವಿಧಿಸಿದ್ದವು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಸರಿದಾರಿಗೆ ತರಲು ಹೆಚ್ಚಿನ ಲಾಭಗಳಿಕೆಯ ಉದ್ದೇಶದಿಂದ ಯೂರೋಪಿಯನ್‌ ರಾಷ್ಟ್ರಗಳಿಗೆ ಅನಿಲದ ಹರಿವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದಾರೆ ಎಂದು ಜರ್ಮನಿ ಸೇರಿದಂತೆ ಐರೋಪ್ಯ ರಾಷ್ಟ್ರಗಳು ಶಂಕಿಸಿವೆ.
ಯೂರೋಪ್‌ ನಲ್ಲಿ ಚಳಿಗಾಲ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ನೈಸರ್ಗಿಕ ಅನಿಲಕ್ಕೆ  ಬೇಡಿಕೆ ಅತಿಹೆಚ್ಚು. ಈ ಪರಿಸ್ಥಿತಿಯನ್ನೆದುರಿಸಲು ಅಲ್ಲಿನ ರಾಷ್ಟ್ರಗಳು ನವೆಂಬರ್‌ ವೇಳೆಗೆ ಕನಿಷ್ಠ 80% ಸಾಮರ್ಥ್ಯದಷ್ಟು ನೈಸರ್ಗಿಕ ಅನಿಲ ಸಂಗ್ರಹಿಸಿಟ್ಟಿರುತ್ತವೆ. ಆದರೆ ಈ ಬಾರಿ ಖಂಡದ ಅತಿದೊಡ್ಡ ಗ್ರಾಹಕ ರಾಷ್ಟ್ರಗಳ ಅನಿಲ ಸಂಗ್ರಹಾಗಾರದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಅನಿಲ ಸಂಗ್ರಹವಿದೆ. ಚಳಿಗಾಲದಲ್ಲಿ ಅನಿಲ ವ್ಯತ್ಯಯ ಕಾಣಸಿಕೊಂಡರೆ, ಭಾರೀ ಬೆಲೆ ಏರಿಕೆ ಸಂಭವಿಸುವ ಭೀತಿಯಲ್ಲಿ ಯೂರೋಪಿಯನ್‌ ರಾಷ್ಟ್ರಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!