Sunday, July 3, 2022

Latest Posts

ಫೇಸ್‌ಬುಕ್‌- ಇನ್ಸ್ಟಾ ರಷ್ಯಾದಲ್ಲಿ ಬ್ಯಾನ್;‌ ದೇಶವಿರೋಧಿ ಸಂದೇಶ ಹಂಚುವವರಿಗೆ 15 ವರ್ಷ ಜೈಲು!

ಹೊಸ ದಿಗಂತ ಡಿಜಿಟಲ್‌ ಡೆಸ್ಕ್
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂಗಳನ್ನು ದೇಶದಲ್ಲಿ ಬಳಸದಂತೆ ರಷ್ಯಾ ನ್ಯಾಯಾಲಯ ನಿಷೇಧ ಹೇರಿದೆ.
ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಹರಿದಾಡುತ್ತಿದ್ದ ನಕಲಿ ಸುದ್ದಿಗಳು ಮತ್ತು ರಷ್ಯಾದಲ್ಲಿನ ಆಂತರಿಕ ಪ್ರತಿಭಟನೆಗಳ ಕುರಿತಾದ ಸುದ್ದಿಗಳನ್ನು ನಿರ್ಬಂಧಿಸುವಂತೆ ರಷ್ಯಾ ಸರ್ಕಾರವು ಪೇಸ್‌ ಬುಕ್‌ ಮತ್ತು ಇನ್ಸ್ಟಾಗ್ರಾಮ್‌ ಮುಖ್ಯಸ್ಥರ ಬಳಿ ಮನವಿ ಮಾಡಿತ್ತು. ಆದರೆ ರಷ್ಯಾ ಮನವಿಗೆ ಅವೆರಡೂ ಸಂಸ್ಥೆಗಳು ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆ ಎರಡೂ ಸಂಸ್ಥೆಗಳನ್ನು ನಿರ್ಬಂಧಿಸಲಾಗಿತ್ತು. ಈ ವಿಚಾರದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾದ ಪರ ತೀರ್ಪಿತ್ತಿದೆ.
ದೇಶದ ಭದ್ರತೆ ದೃಷ್ಟಿಯಿಂದ ನಿಶೇಧ ಸೂಕ್ತ ಎಂದಿದೆ. ಇದರ ಜೊತೆಗೆ ಕೆಲ ವಿದೇಶಿ ಮೂಲದ ವೆಬ್‌ಸೈಟ್‌ಗಳಿಗೆ ರಷ್ಯಾದಲ್ಲಿ ನಿರ್ಬಂಧ ಹೇರಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಪೋಸ್ಟ್ ಗಳನ್ನು ಹಾಕುವವರಿಗೆ ೧೫ ವರ್ಷಗಳ ತನಕ ಜೈಲು ಶಿಕ್ಷೆಯ ಕಾನೂನನ್ನು ರಷ್ಯಾ ಸರ್ಕಾರ ಜಾರಿಗೆ ತಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss