ಹೊಸದಿಗಂತ ಡಿಜಿಟಲ್ ಡೆಸ್ಕ್
ನಾವು ನೆಹರೂ-ಗಾಂಧಿ ಕುಟುಂಬದ ಗುಲಾಮರು ಮತ್ತು ಕೊನೆಯ ಉಸಿರು ಇರುವವರೆಗೂ ಅವರ ಗುಲಾಮರಾಗಿಯೇ ಇರುತ್ತೇವೆ ಎಂದು ರಾಜಸ್ಥಾನದ ಸಿರೋಹಿ ಶಾಸಕ ಸನ್ಯಾಮ್ ಲೋಧಾ ಅವರು ವಿಧಾನಸಭೆಯಲ್ಲಿ ಮಾತನಾಡುವಾಗ ಹೆಮ್ಮೆಯಿಂದ ಘೋಷಿಸಿದ್ದಾರೆ. ಲೋಧಾ ಆವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಲೋಧಾ, ನೆಹರು-ಗಾಂಧಿ ಕುಟುಂಬವು ದೇಶವನ್ನು ಪ್ರಗತಿಯತ್ತ ಕೊಂಡೊಯ್ದಿದೆ. ಉತ್ತಮ ಆಡಳಿತವನ್ನು ನೀಡಿದೆ. ಹಾಗಾಗಿ ನಾವು ಕೊನೆ ಉಸಿರಿರುವವರೆಗೂ ಆ ಕುಟುಂಬದ ಗುಲಾಮರಾಗಿಯೇ ಇರಲು ಬಯಸುತ್ತೇವೆ ಎಂದು ಹೇಳಿದರು. ಅವರ ಹೇಳಿಕೆಗೆ ಬಿಜೆಪಿ ಹಾಗೂ ವಿರೋಧ ಪಕ್ಷಗಳಿಂದ ತೀಕ್ಷ್ಣವಾದ ಪ್ರತಿಕ್ರಿಯೆ ಬಂದಿದೆ.
ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಮಾತನಾಡಿ, ಮತ್ತೊಂದು ಹೊಸತಾದ ಗುಲಾಮಿ ಸಂಸ್ಕೃತಿ ಬಂದಿದೆ. ಗುಲಾಮರಾಗಿರುವುದಕ್ಕೆ ನಿಮಗೆ ಅಭಿನಂದನೆಗಳು. ಗುಲಾಮರಾಗಿರುವ ಇವರು, ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ?. ಗುಲಾಮರು ತಮ್ಮ ಮನಸ್ಪೂರ್ತಿಯಾಗಿ ನಡೆದುಕೊಳ್ಳಲು, ಮಾತನಾಡಲು ಸಾಧ್ಯವಿಲ್ಲ, ಅದನ್ನು ಇವರು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ