ತನ್ನಿಂದ ಹೊರಹೋದ ಕಂಪನಿಗಳ ಸಂಪತ್ತು ಜಪ್ತಿಗೆ ಮುಂದಾಗಿದೆ ರಷ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಉಕ್ರೇನ್‌ ಮೇಲಿನ ಆಕ್ರಮಣಕ್ಕೆ ಪ್ರತಿಯಾಗಿ ಕಠಿಣ ನಿರ್ಬಂಧಗಳನ್ನು ಹೇರಿ ರಷ್ಯಾ ಆರ್ಥಿಕ ಬಲ ಕುಗ್ಗಿಸುವ ಪಾಶ್ಚಿಮಾತ್ಯ ರಾಷ್ಟ್ರಗಳ ಯತ್ನಗಳಿಗೆ ರಷ್ಯಾ ಸೆಡ್ಡುಹೊಡೆದಿದ್ದು, ತನ್ನ ದೇಶದ ಕ್ರೆಮ್ಲಿನ್‌ ಪ್ರದೇಶದಿಂದ ತೊರೆಯುತ್ತಿರುವ ಪಾಶ್ಚಿಮಾತ್ಯ ಕಂಪನಿಗಳ ಸಂಪತ್ತನ್ನು ವಶಕ್ಕೆ ಪಡೆಯಲು ಯೋಜನೆಗಳನ್ನು ರೂಪಿಸಿದೆ.
ಮೆಕ್‌ಡೊನಾಲ್ಡ್, ‌ ಕೋಕಾ-ಕೋಲಾ, ಪೆಪ್ಸಿ ಸೇರಿದಂತೆ ಅನೇಕ ಜಾಗತಿಕ ಕಂಪನಿಗಳು ಈ ವಾರ ರಷ್ಯಾದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದ ಬೆನ್ನಲ್ಲೇ ರಷ್ಯಾ ಈ ನಿರ್ಧಾರವನ್ನು ಕೈಗೊಂಡಿದೆ.
ವಿದೇಶಿಗರು 25% ಕ್ಕಿಂತ ಹೆಚ್ಚಿನ ಮಾಲೀಕತ್ವ ಹಕ್ಕುಗಳನ್ನು ಹೊಂದಿರುವ ನಿರ್ಗಮಿತ ಕಂಪನಿಗಳ ಮೇಲೆ ತಾತ್ಕಾಲಿಕ ನಿಯಂತ್ರಣ ಸಾಧಿಸಲು ಯೋಜನೆ ರೂಪಿಸಲಾಗಿದೆ ಎಂದು ರಷ್ಯಾ ವಿತ್ತ ಸಚಿವಾಲಯ ಹೇಳಿಕೆ ನೀಡಿದೆ.
ಈ ವಿಚಾರವಾಗಿ ಸಚಿವರೊಂದಿಗೆ ಮಾತುಕತೆ ನಡೆಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಷ್ಯಾದ ಕ್ರೆಮ್ಲಿನ್ ಪ್ರದೇಶದಿಂದ ಹೊರನಡೆಯುತ್ತಿರುವ ಜಾಗತಿಕ ಸಂಸ್ಥೆಗಳ ಸ್ವತ್ತುಗಳನ್ನು ವಶಕ್ಕೆ ಪಡೆಯಲು ಕಾನೂನುಬದ್ಧ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಉದ್ಯಮಗಳನ್ನು ಸೂಕ್ತವಾಗಿ ನಿರ್ವಹಿಸಬಲ್ಲ ಸಾಮರ್ಥ್ಯ ಉಳ್ಳವರಿಗೆ ವರ್ಗಾಯಿಸುವುದು ಸರ್ಕಾರದ ಉದ್ದೇಶ ಎಂದು ಪುಟಿನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!