ಯುದ್ಧದ ಸಾವು-ನೋವುಗಳಿಗೆ ರಷ್ಯವೇ ಹೊಣೆ- ಅಮೆರಿಕ ಅಧ್ಯಕ್ಷ ಬೈಡೆನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್ ವಿರುದ್ಧ ರಷ್ಯ ಅಧ್ಯಕ್ಷ ಪುಟಿನ್ ಯುದ್ಧ ಘೋಷಣೆ ಮಾಡಿದ್ದು, ಈ ಯುದ್ಧದ ಸಂಪೂರ್ಣ ಹೊಣೆಯನ್ನು ರಷ್ಯವೇ ಹೊರಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

ಪುಟಿನ್ ಯುದ್ಧ ಘೋಷಣೆ ಪೂರ್ವನಿಯೋಜಿತ. ಈ ಯುದ್ಧದಿಂದ ದುರಂತ ಸಂಭವಿಸಲಿದೆ, ಸಾಕಷ್ಟು ಜೀವಹಾನಿಯಾಗಲಿದೆ. ಈ ದಾಳಿ ತರುವ ಸಾವು-ನೋವಿಗೆ ರಷ್ಯ ಮಾತ್ರ ಹೊಣೆಯಾಗಿರಲಿದೆ.

ಯುನೈಟೆಡ್ ಸ್ಟೇಟ್ಸ್, ಮಿತ್ರ ರಾಷ್ಟ್ರಗಳು ಹಾಗೂ ಪಾಲುದಾರರು ಒಗ್ಗಟ್ಟಾದ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ. ಈ ಯುದ್ಧಕ್ಕೆ ರಷ್ಯಾವನ್ನು ಹೊಣೆಗಾರ ಎಂದು ಜಗತ್ತು ಹೇಳುತ್ತದೆ, ಉಕ್ರೇನ್‌ನ ಜನರಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಬಿಡೆನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!