ಇಲ್ಲಿ ಬಿದಿರಿನ ನಂತರ ಅನಾನಸು – ಹಲಸಿಗೂ ಸಿಗಲಿದೆ ಪ್ರೋತ್ಸಾಹ

ಹೊಸದಿಗಂತ ಡಿಜಿಟಲ್ ಡೆಸ್ಕ್

ತ್ರಿಪುರ: ‘ತ್ರಿಪುರ ಬ್ಯಾಂಬೂ ಮಿಷನ್’ (ಟಿಬಿಎಂ) ನಂತರ ರಾಜ್ಯ ಸರಕಾರವು ಅನಾನಸ್ ಮತ್ತು ಹಲಸಿನ ಹಣ್ಣುಗಳನ್ನು ಉತ್ತೇಜಿಸಲು ‘ತ್ರಿಪುರ ಅನಾನಸ್ ಆ್ಯಂಡ್ ಜಾಕ್ ಫ್ರೂಟ್ ಮಿಷನ್’ (ಟಿಪಿಜೆಎಂ)ಗೆ ಸಮಗ್ರ ವಿಧಾನ ರೂಪಿಸಿದೆ.

ರಾಜ್ಯದಲ್ಲಿ ಹೇರಳವಾಗಿ ಬೆಳೆಯುವ ಎರಡು ತೋಟಗಾರಿಕೆ ಬೆಳೆಗಳ ಉತ್ಪಾದನೆ ಮತ್ತು ಮೌಲ್ಯವರ್ಧನೆಯನ್ನು ಉತ್ತೇಜಿಸಲು ತ್ರಿಪುರ ಸರಕಾರವು ಶೀಘ್ರದಲ್ಲೇ ಟಿಪಿಜೆಎಂ ಅನ್ನು ಪ್ರಾರಂಭಿಸಲಿದೆ. ಇದು ₹ 152 ಕೋಟಿಗಳ ಬಜೆಟ್ ವೆಚ್ಚದೊಂದಿಗೆ ಈ ವರ್ಷ ಏಪ್ರಿಲ್ 1ರಿಂದ ಐದು ವರ್ಷಗಳವರೆಗೆ ಇರಲಿದೆ.

ಪ್ರಸಕ್ತ 8,800 ಎಕರೆ ಪ್ರದೇಶದಲ್ಲಿ ಅನಾನಸ್ ಮತ್ತು 8,929 ಹೆಕ್ಟೇರ್‌ನಲ್ಲಿ ಹಲಸು ಬೆಳೆಯಲಾಗುತ್ತಿದೆ. ತ್ರಿಪುರ ಸರಕಾರವು ಅನಾನಸ್ ಮತ್ತು ಹಲಸಿನ ಉತ್ಪಾದನೆಯನ್ನು ದೊಡ್ಡ ಮಟ್ಟದಲ್ಲಿ ವೃದ್ಧಿಸಲು ಬಯಸಿದೆ. ರಾಜ್ಯವು ಈಗಾಗಲೇ ಯುಕೆ ಮತ್ತು ಜರ್ಮನಿಯಂತಹ ಯುರೋಪಿಯನ್ ರಾಷ್ಟ್ರಗಳಿಗೆ ಅನಾನಸ್ ಮತ್ತು ಹಲಸುಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!