ಹೊಸದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನಿಯನ್ ಮಿಲಿಟರಿ ಮೇಲೆ ದೀರ್ಘ ಶ್ರೇಣಿಯ ಹೈಪರ್ಸಾನಿಕ್ ಮತ್ತು ಕ್ರೂಸ್ ಕ್ಷಿಪಣಿಗಳ ಹೊಸ ಸರಣಿಯ ದಾಳಿಯನ್ನು ನಡೆಸಲಾಗಿದೆ ಎಂದು ರಷ್ಯಾದ ಮಿಲಿಟರಿ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿದ್ದ ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್ ಅವರು, ಕಿಂಜಾಲ್ ಹೈಪರ್ಸಾನಿಕ್ ಕ್ಷಿಪಣಿಯು ಮೈಕೊಲೈವ್ನ ಕಪ್ಪು ಸಮುದ್ರದ ಬಂದರಿನ ಬಳಿಯ ಕೊಸ್ಟಿಯಾಂಟಿನಿವ್ಕಾದಲ್ಲಿರುವ ಉಕ್ರೇನಿಯನ್ ಇಂಧನ ಡಿಪೋವನ್ನು ದ್ವಂಸ ಮಾಡಿದೆ.
ಈ ಹೊಸ ಸರಣಿಯ ದಾಳಿ 2,000 ಕಿಲೋಮೀಟರ್ (1,250 ಮೈಲುಗಳು) ದೂರದಲ್ಲಿರುವ ಗುರಿಗಳನ್ನು ಶಬ್ದದ 10 ಪಟ್ಟು ವೇಗದಲ್ಲಿ ಹೊಡೆಯುವ ಸಾಮರ್ಥ್ಯ ಹೊಂದಿದೆ.
ಕ್ಯಾಸ್ಪಿಯನ್ ಸಮುದ್ರದಿಂದ ರಷ್ಯಾದ ಯುದ್ಧನೌಕೆಗಳು ಉಡಾವಣೆ ಮಾಡಿದ ಕಲಿಬ್ರ್ ಕ್ರೂಸ್ ಕ್ಷಿಪಣಿಗಳು ಸಹ ಕೋಸ್ಟಿಯಾಂಟಿನಿವ್ಕಾದಲ್ಲಿನ ಇಂಧನ ಡಿಪೋ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿವೆ.
ಕಲಿಬ್ರ್ ಕ್ಷಿಪಣಿಗಳನ್ನು ಉತ್ತರ ಉಕ್ರೇನ್‌ನ ಚೆರ್ನಿಹಿವ್ ಪ್ರದೇಶದ ನಿಜಿನ್‌ನಲ್ಲಿನ ರಕ್ಷಣಾ ದುರಸ್ತಿ ಘಟಕವನ್ನು ನಾಶ ಮಾಡಲು ಬಳಸಲಾಗಿದೆ ಎಂದು ಕೊನಾಶೆಂಕೋವ್ ತಿಳಿಸಿದ್ದಾರೆ.