ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಗುರುವಾರ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ ನಂತರ ಎರಡೂ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದ್ದು, ರಷ್ಯಾ ಉಕ್ರೇನ್ ನಲ್ಲಿನ ವಾಯುನೆಲೆ ಹಾಗೂ ಮಿಲಿಟರಿ ಸ್ವತ್ತುಗಳನ್ನು ಧ್ವಂಸ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿದ ರಷ್ಯಾ ಸೇನೆ, ಉಕ್ರೇನ್‌ನ ವಾಯು ನೆಲೆಗಳು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ನಾಶಮಾಡಿರುವುದಾಗಿ ತಿಳಿಸಿದೆ.
ರಷ್ಯಾದ ತನ್ನ ಸಶಸ್ತ್ರ ಪಡೆಗಳು ಉಕ್ರೇನ್ ಮೇಲೆ ತೀವ್ರ ದಾಳಿ ನಡೆಸುತ್ತಿದ್ದು, ಈಗಾಗಲೇ ಬೋರಿಸ್ಪಿಲ್, ಓಜೆರ್ನಾಯ್, ಕುಲ್ಬಾಕಿನ್, ಚುಗೆವ್ನಲ್ಲಿನ ವಾಯುನೆಲೆಗಳ ಮೇಲೆ ರಾಕೆಟ್ ಮತ್ತು ಬಾಂಬ್, ವಸಾಹತುಗಳ ಮೇಲೆ ಫಿರಂಗಿ ಶೆಲ್ ದಾಳಿ ಪ್ರಾರಂಭಿಸಿದೆ.
ಇನ್ನು ರಷ್ಯಾಗೆ ಪ್ರತ್ಯುತ್ತರ ನೀಡುತ್ತಿರುವ ಉಕ್ರೇನ್ ದೇಶದ ಪೂರ್ವದಲ್ಲಿ ರಷ್ಯಾದ 5 ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ. ಉಕ್ರೇನ್ ನ ರಕ್ಷಣಾ ಪಡೆಗಳು ಯುದ್ಧಕ್ಕೆ ಸಂಪೂರ್ಣ ಸಜ್ಜಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉಕ್ರೇನ್ ತಿಳಿಸಿದೆ.