ಉಕ್ರೇನ್ ಮಿಲಿಟರಿ ಮಾತ್ರ ನಮ್ಮ ಗುರಿ ಎಂದಿದ್ದ ರಷ್ಯಾ: ಉಕ್ರೇನ್‌ನ 352 ನಾಗರಿಕರ ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ-ಉಕ್ರೇನ್ ಯುದ್ಧ ಮುಂದುವರಿಯುತ್ತಿದ್ದು, ರಷ್ಯಾ ಆಕ್ರಮಣಾಕಾರಿ ದಾಳಿಯಿಂದ ಉಕ್ರೇನ್‌ನ 14 ಮಕ್ಕಳು ಸೇರಿದಂತೆ 352 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ತಿಳಿಸಿದೆ.

ಉಕ್ರೇನ್ ಸಚಿವಾಲಯದ ಹೇಳಿಕೆ ಬಿಡುಗಡೆ ಮಾಡಿದ್ದು, ದಾಳಿಯಲ್ಲಿ ಈಗಾಗಲೇ 1,684 ಜನ ಗಾಯಗೊಂಡಿದ್ದಾರೆ ಎಂದಿದೆ. ಆದರೆ ತನ್ನ ಸಶಸ್ತ್ರ ಪಡೆಗಳ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ತಮ್ಮ ಪಡೆಗಳು ಉಕ್ರೇನ್ ಮಿಲಿಟರಿಯನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ನಾಗರಿಕರಿಗೆ ಯಾವುದೇ ತೊಂದರೆ ಇಲ್ಲ ಎಂದು ರಷ್ಯಾ ಹೇಳಿದೆ. ಆದರೂ 352 ನಾಗರಿಕರು ಮೃತಪಟ್ಟಿದ್ದಾರೆ.

ಮೊದಲ ಬಾರಿಗೆ ರಷ್ಯಾ ಕೂಡ ಸಾವು ನೋವಿನ ಬಗ್ಗೆ ಮಾಹಿತಿ ನೀಡಿದೆ. ತಮ್ಮ ಸೈನಿಕರು ಕೂಡ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದಷ್ಟೇ ಮಾಹಿತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!